ಬೈಂದೂರಿನಲ್ಲಿ ಅವಳಿ ಅಪಘಾತ: ಈರ್ವ ಬೈಕ್ ಸವಾರರ ದುರ್ಮರಣ

Call us

ಬೈಂದೂರು: ಶನಿವಾರ ಮಧ್ಯಾಹ್ನದ ವೇಳೆಗೆ ಬೈಂದೂರಿನ ಹೊಸ ಬಸ್ ನಿಲ್ದಾಣದ ಬಳಿ ಹಾಗೂ ನಾಕಟ್ಟೆಯ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೈಂದೂರಿನ ಶಿಕ್ಷಕ ಹಾಗೂ ಹೋಟೆಲ್ ನೌಕರರೋರ್ವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

Call us

Call us

ಘಟನೆಯ ವಿವರ:
ನಾವುಂದದ ಗೋಪಾಲ ಪೂಜಾರಿ(೪೦) ಎಂಬುವವರು ಬೈಂದೂರು ತಹಶೀಲ್ದಾರರ ಕಛೇರಿ ರಸ್ತೆಯಿಂದ ಹೊಸ ಬಸ್ ನಿಲ್ದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿರೂರು ಕಡೆಯಿಂದ ಬೈಕಿನಲ್ಲಿ ಬರುತ್ತಿದ್ದ ವೇಳೆ ಶಿರೂರು ಬದಿಯಿಂದ ಬರುತ್ತಿದ್ದ ಕಂಟೆನರ್ ಲಾರಿಯೊಂದು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಿರಸಿ ಮೂಲದವರಾದ ಗೋಪಾಲ ಪೂಜಾರಿ ಹೋಟೆಲೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದು ಇತ್ತಿಚಿಗೆ ನಾವುಂದದ ತನ್ನ ಹೆಂಡತಿಯ ಮನೆಗೆ ಬಂದಿದ್ದರೆನ್ನಲಾಗಿದೆ. ಕೆಲಸದ ನಿಮಿತ್ತ ಬೈಂದೂರಿಗೆ ಬಂದು ನಾವುಂದಕ್ಕೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಈ ಅಪಘಾತ ನಡೆದ ಸ್ವಲ್ಪ ಹೊತ್ತಿನಲ್ಲೇ ಪಡುವರಿಯ ಜನಾರ್ಧನ ಆಚಾರ್ಯ(45) ಎಂಬುವವರು ಬೈಂದೂರು ಸಮೀಪದ ನಾಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಡ್ತರೆ ಕಡೆಗೆ ಹೋಗುತ್ತಿದ್ದಾಗ ಎದುರಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬಿದ್ದು ಟಿಪ್ಪರ್ ಅವರ ಮೇಲೆ ಹೋದ ಪರಿಣಾಮ ತಲೆ ಛೀದ್ರಗೊಂಡು ಮೃತಪಟ್ಟಿದ್ದಾರೆ. ಮೈಕಳ ಶಾಲೆಯಲ್ಲಿ ಸಹಶಿಕ್ಷಕರಾಗಿರುವ ಜನಾರ್ಧನ ಆಚಾರ್ಯ ಬೈಂದೂರಿನ ಶಾಲೆಯೊಂದರಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮತ್ತೆ ಮೈಕಳಕ್ಕೆ ತೆರಳುತ್ತಿದ್ದ ವೇಳೆಗೆ ಈ ಅವಘಡ ಸಂಭವಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Call us

Call us

ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ಭೇಟಿನೀಡಿದ್ದಾರೆ ಪರಿಶೀಲಿಸಿದ್ದಾರೆ. ಘಟನೆಯಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ವ್ಯತ್ಯಯವಾಯಿತು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG-20151121-WA0001 IMG-20151121-WA0002 IMG-20151121-WA0003 IMG-20151121-WA0013 IMG-20151121-WA0018

Leave a Reply

Your email address will not be published. Required fields are marked *

18 + seven =