ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ನ್ಯಾಯಾಲಯ ಸ್ಥಾಪನೆ ಬಗ್ಗೆ ಸರಕಾರ ಸ್ಥಳ ಮಂಜೂರು ಮಾಡಿದೆ. ಆದರೆ ನ್ಯಾಯಾಲಯಕ್ಕೆ ಇನ್ನೂ ಅಧೀಸೂಚನೆ ಹೊರಡಿಸಿಲ್ಲ. ಈ ಬಗ್ಗೆ ಸರಕಾರದ ಗಮನ ಸಳೆಯಲು ಬೈಂದೂರು ಭಾಗದ ಯವ ವಕೀಲರು ಸರಕಾರಕ್ಕೆ ಮನವಿ ಸಲ್ಲಿಸಿದರು.
ಕುಂದಾಪುರದ ಉಪ ವಿಭಾಗಧಿಕಾರಿ ಕಛೇರಿಗೆ ಭೇಟಿ ನೀಡಿ 40ವರ್ಷದ ಹಿಂದಿನ ತಾಲೂಕು ರಚನೆ ಬೇಡಿಕೆ ಈಡೇರಿದೆ. ಆದರೆ ಇಲ್ಲಿ ನ್ಯಾಯಾಲಯ ಸ್ಥಾಪನೆ ಬೇಡಿಕೆ ಇನ್ನೂ ಹಾಗೆ ಇದೆ ಶಿಘ್ರವೇ ನ್ಯಾಯಾಲಯ ಸ್ಥಾಪನೆಗೆ ಅಧೀಸೂಚನೆ ನೀಡಬೇಕೆಂದು ಕೋರಿಕೊಂಡಿದ್ದಾರೆ.
ಕುಂದಾಪುರ ಗ್ರೇಡ್ 2 ತಹಶೀಲ್ಧಾರ್ ರಾಮಚಂದ್ರ ಹೆಬ್ಬಾರ್ ಮನವಿ ಸ್ವೀಕರಿಸಿದರು.