ಬೈಂದೂರು ಅಕ್ಷತಾ ದೇವಾಡಿಗ ಕೊಲೆ ಪ್ರಕರಣ: ಎರಡನೇ ಆರೋಪಿ ಅಕ್ಷಯ್ ಗೆ ಜಾಮೀನು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಹೇನುಬೇರಿನ ಪ್ರತಿಭಾವಂತ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗಳ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅಕ್ಷಯ್ ಗೆ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ನೀಡಿದೆ. ಪ್ರಕರಣದ ಪ್ರಮುಖ ಆರೋಪಿ ಯೋಜನಾನಗರದ ಸುನಿಲ್ ಗೆ ಸಾಕ್ಷ ನಾಶಪಡಿಸಲು ಸಹಕರಿಸಿ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಕ್ಕಾಗಿ ಅಕ್ಷಯ ಬಂಧಿನಕ್ಕೊಳಗಾಗಿದ್ದ. ಪ್ರಕರಣ ವಿಚಾರಣೆ ನಡೆಸುತ್ತಿರುವ ನ್ಯಾಯಲಯ ಅಕ್ಷಯಗೆ ಜಾಮೀನು ನೀಡಿದೆ.

Click here

Click Here

Call us

Call us

Visit Now

Call us

Call us

ಬೈಂದೂರಿನ ಇತಿಹಾಸದಲ್ಲಿ ಕರಾಳ ದಿನ:
ಬೈಂದೂರು ಕ್ಷೇತ್ರದ ಹೇನಬೇರು ಹೊಸಹಕ್ಲುವಿನ ಬಾಬು ದೇವಾಡಿಗ ಹಾಗೂ ರಾಧಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗಳಾದ ಅಕ್ಷತಾ ದೇವಾಡಿಗ ಕ್ರೂರಿಯ ಹೇಯ ಕೃತ್ಯಕ್ಕೆ ನಲುಗಿ ಪ್ರಾಣ ಕಳೆದುಕೊಂಡ ಪ್ರತಿಭಾವಂತ ಹೆಣ್ಣುಮಗಳು. ಬೆಟ್ಟದಷ್ಟು ಕನಸುಗಳನ್ನು ಹೊತ್ತು, ಭವಿಷ್ಯದ ಸ್ಪಷ್ಟ ಕಲ್ಪನೆಯೊಂದಿಗೆ ಸಾಗುತ್ತಿದ್ದ ಅಕ್ಷತಾಳಿಗೆ ಎದುರಾದ ಭಯಾನಕ ಸಂದರ್ಭ ಬೈಂದೂರಿನ ಜನತೆಯನ್ನು ದಿಗ್ಬ್ರಾಂತರನ್ನಾಗಿಸಿತ್ತು. ಆರೋಪಿಗಳ ಬಂಧನಕ್ಕೆ ಇಡಿ ಊರೇ ಪ್ರತಿಭಟಿಸಿತ್ತು. ಪ್ರಕರಣದ ಬೆನ್ನತ್ತಿದ ಎಸ್ಪಿ ಅಣ್ಣಾಮಲೈ ಅವರ ತಂಡ ಮೂರು ದಿನದಲ್ಲಿ ಆರೋಪಿಗಳನ್ನು ಬಂಧಿಸಿ ಜನರ ಆಕ್ರೋಶ ತಣಿಸುವ ಕೆಲಸ ಮಾಡಿತ್ತು. ಅಕ್ಷತಾ ಮರೆಯಾಗಿ ತಿಂಗಳುಗಳೇ ಕಳೆದಿವೆ. ಸಾವಿನ ನೆಪದಲ್ಲಿ ರಾಜಕೀಯ ಮಂದಿಯ ಆಶ್ವಾಸನೆ, ಒಂದಿಷ್ಟು ಊರಿನ ಅಭಿವೃದ್ಧಿ ಆದರೂ ಅಕ್ಷತಾಳನ್ನು ಕಳೆದುಕೊಂಡ ಆ ತಾಯಿಯ ರೋದನೆ ಮಾತ್ರ ನಿಂತಿಲ್ಲ.

►ಆರಿದ ಅಕ್ಷತಾ ಎಂಬ ಬೆಳಕು ಮತ್ತು ಹೊಲಸು ರಾಜಕೀಯ – http://kundapraa.com/?p=3593

►ಪ್ರಕರಣದ ಸಂಪೂರ್ಣ ವರದಿ – http://kundapraa.com/tag/akshatha-devadiga-murder/

Leave a Reply

Your email address will not be published. Required fields are marked *

1 × 5 =