ಬೈಂದೂರು: ಅಕ್ಷರ ದಾಸೋಹ ನೌಕರರ ಸಿಪಿಐ(ಎಂ) ಶಾಖಾ ಸಮ್ಮೇಳನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಸಿಪಿಐ(ಎಂ) ಪಕ್ಷದ ಅಖಿಲ ಭಾರತ ಮಹಾ ಅಧಿವೇಶನ ಕೇರಳ ರಾಜ್ಯದ ಕಣ್ಣೂರು ನಗರದಲ್ಲಿ ಜರಗಲಿರುವುದರ ಪೂವ೯ಭಾವಿಯಾಗಿ ದೇಶದ ಎಲ್ಲಾ ರಾಜ್ಯ, ಜಿಲ್ಲೆ, ತಾಲೂಕು/ವಲಯ ಹಾಗೂ ಪ್ರಾಥಮಿಕ ಶಾಖಾ ಸಮ್ಮೇಳನಗಳು ನಡೆಯುವ ಹಂತವಾಗಿ ಬೈಂದೂರು ವಲಯ ವ್ಯಾಪ್ತಿಯ ಸಿಪಿಐ(ಎಂ) ಪಕ್ಷದ ಅಕ್ಷರ ದಾಸೋಹ ನೌಕರರ ಶಾಖಾ ಸಮ್ಮೇಳನವು ಸಿಪಿಐ(ಎಂ) ಕಚೇರಿಯಲ್ಲಿ ನಡೆಯಿತು.

Call us

Call us

ಸಿಪಿಐ(ಎಂ) ಉಡುಪಿ ಜಿಲ್ಲಾ ಕಾಯ೯ದಶಿ೯ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಸಮ್ಮೆಳನ ಉದ್ಘಾಟಿಸಿ ಮಾತನಾಡಿ, ದುಡಿಯುವ ವಗ೯ವಾದ ರೈತ,ಕಾಮಿ೯ಕರ ಪಕ್ಷಪಾತಿ ಸಿಪಿಐ(ಎಂ) ಪಕ್ಷವನ್ನು ತಳಮಟ್ಟ ದಿಂದ ಕಟ್ಟಲು ಶೋಷಿತ ವಗ೯ದ ದುಡಿಯುವ ಜನರ ಬಲಿಷ್ಟ ಹೋರಾಟ, ಚಳುವಳಿಯನ್ನು ಸಂಘಟಿಸಲು ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

Call us

Call us

ಪಕ್ಷದ ಬೈಂದೂರು ವಲಯ ಕಾಯ೯ದಶಿ೯ ಸುರೇಶ್ ಕಲ್ಲಾಗರ್ ಮಾತನಾಡಿ ಗುಲ್ವಾಡಿಯಲ್ಲಿ ಜರಗುವ ಸಿಪಿಐ(ಎಂ) ಪಕ್ಷದ ಬೈಂದೂರು ವಲಯದ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಶಾರದಾ ಶಿರೂರು ಶ್ರದ್ಧಾಂಜಲಿ ಠರಾವು ಮಂಡಿಸಿದರು ಶಾಖಾ ಕಾಯ೯ದಶಿ೯ ಸಿಂಗಾರಿ ನಾವುಂದ ವರದಿ ಮಂಡಿಸಿದರು. ಹಿರಿಯ ಸದಸ್ಯೆ ಶಾರದಾ ಬೈಂದೂರು ಧ್ವಜಾರೋಹಣ ನೆರವೇರಿಸಿದರು. ಸಿಪಿಐ(ಎಂ) ಪಕ್ಷದ ಮುಖಂಡರಾದ ಜಯಶ್ರೀ ಪಡುವರಿ, ರೋನಾಲ್ಡ್ ರಾಜೇಶ್ ಕ್ವಾಡ್ರಸ್, ಸುಶೀಲ ಸಾಲಿಮಕ್ಕಿ ಬಿಜೂರು, ಸಾವಿತ್ರಿ ಹೆಮ್ಮಾಡಿ, ಸರಸ್ವತಿ ಬೈಂದೂರು ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

five × 3 =