ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅರ್ಬನ್ ಸೌಹಾರ್ದ ಕೊ- ಆಪರೇಟಿವ್ ಸೊಸೈಟಿಯ ಇ- ಸ್ಟಾಂಪ್ ಸೌಲಭ್ಯ ಉದ್ಘಾಟನೆ ಮುಖ್ಯ ಕಛೇರಿಯಲ್ಲಿ ನಡೆಯಿತು.
ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಉದ್ಘಾಟಿಸಿದರು, ಸೊಸೈಟಿ ಅಧ್ಯಕ್ಷರಾದ ಮಣಿಕಂಠ ಎಸ್ . ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೈಂದೂರು ಭಾಗದ ವಕೀಲರಾದ ಮೋಬಿ ಪಿ.ಸಿ, ಮಂಗೇಶ್ ಶ್ಯಾನುಭಾಗ್, ಪ್ರಶಾಂತ ಪೂಜಾರಿ, ಲಿಂಗಪ್ಪ ಮೇಸ್ತ, ಚಂದ್ರಶೇಖರ್ ಪಿ. ಹಾಗೂ ಎಲ್ಲಾ ನಿರ್ದೇಶಕರು, ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
