ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಬಿದ್ದಿರುವ ಹುದ್ದೆಗಳನ್ನು ಈ ಕೂಡಲೆ ಭತಿ೯ ಮಾಡಬೇಕು.ವಿವಿಧ ಇಲಾಖೆಗಳಲ್ಲಿ ನೇಮಕ ಗೊಂಡಿರುವ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ಖಾಯಂಗೊಳಿಸಬೇಕು,ಹೊರ ಗುತ್ತಿಗೆ ಪದ್ಧತಿಯನ್ನೇ ರದ್ದು ಪಡಿಸಲು ಒತ್ತಾಯಿಸುವ ಹೋರಾಟಕ್ಕೆ ಮುಂದಾಗಬೇಕು ಎಂದು ಡಿವೈಎಫ್ಐ ರಾಜ್ಯ ಮಾಜಿ ಕಾಯ೯ದಶಿ೯ ಮಹಾಂತೇಶ್ ಕರೆ ನೀಡಿದರು.

ಬೈಂದೂರು ಸಿಐಟಿಯು ಕಚೇರಿಯಲ್ಲಿ ಇತ್ತೀಚೆಗೆ ಜರಗಿದ ‘ಉದ್ಯೋಗದ ಹಕ್ಕಿಗಾಗಿ’ ಬೈಂದೂರು ತಾಲೂಕು ಯುವಜನ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಡಿವೈಎಫ್ಐ ಜಿಲ್ಲಾ ಮಾಜಿ ಅಧ್ಯಕ್ಷ ವೆಂಕಟೇಶ್ ಕೋಣಿ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ ಸಾಮಾಜಿಕ ಪಿಡುಗು ಹಾಗೂ ಸ್ಥಳೀಯ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿ ಪರಿಹರಿಸಲು ಯುವಜನರು ಜಾತಿ,ಮತ,ಧಮ೯ ಪ್ರಾದೇಶಿಕತೆ ಭೇದ ಮರೆತು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಭಾರತ ಪ್ರಜಾಸತ್ತಾತ್ಮಕ ಯುವಜನ ಪೆಢರೇಶನ್ (ಡಿವೈಎಫ್ಐ) ಬೈಂದೂರು ತಾಲೂಕು ಸಮಿತಿಗೆ ಅಧ್ಯಕ್ಷರಾಗಿ ವಿಜಯ. ಬಿ. ಕಿರಿಮಂಜೇಶ್ವರ, ಹರೀಶ್ ಬೈಂದೂರು, ಉಪಾಧ್ಯಕ್ಷರಾಗಿ ಚಾಕೊ ಥೋಮಸ್, ಪ್ರದಾನ ಕಾರ್ಯದರ್ಶಿಯಾಗಿ ಜೊಕಿಮ್ ಗ್ರಾಸ್ ಯಡ್ತರೆ, ಕಾರ್ಯದರ್ಶಿಗಳಾಗಿ ನಾಗರಾಜ ಬವಳಾಡಿ ಬಿಜೂರು, ಗುರುರಾಜ ಪಡುವರಿ, ಕೋಶಾಧಿಕಾರಿಯಾಗಿ ರಾಮ ಖಂಬದ ಕೋಣೆ ಇವರನ್ನೊಳಗೊಂಡಂತೆ ಒಟ್ಟು 24 ಮಂದಿಯ ಸದಸ್ಯರನ್ನು ಸವಾ೯ನುಮತದಿಂದ ಆಯ್ಕೆಮಾಡಲಾಯಿತು. ಸಿಐಟಿಯು ತಾಲೂಕು ಸಂಚಾಲಕ ಉದಯ ಗಾಣಿಗ ಮೊಗೇರಿ ಉಪಸ್ಥಿತರಿದ್ದರು.