ಬೈಂದೂರು ಕಾರು ಅಪಘಾತ: ಜೆಡಿಎಸ್ ಮುಖಂಡ ರವಿ ಶೆಟ್ಟಿ ಪ್ರಾಣಾಪಾಯದಿಂದ ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಜೆಡಿಎಸ್ ಮುಖಂಡ ಹಾಗೂ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ರವೀಂದ್ರ (ರವಿ ಶೆಟ್ಟಿ)ರವರು ಬೈಂದೂರು ಕೊಲ್ಲೂರು ಮಾರ್ಗದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪವಾಡ ಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ.

ಶಿಕ್ಷಕರ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿದ್ದು, ಬೂತ್‌ಗೆ ತೆರಳುತ್ತಿರುವಾಗ ರಸ್ತೆಯಲ್ಲಿ ಚಲಿಸುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡುವ ಭರದಲ್ಲಿ ಅವರಿದ್ದ ಕಾರು ಪಕ್ಕಕ್ಕೆ ಎಸಯಲ್ಪಟ್ಟು ಪಲ್ಟಿಹೊಡೆದು ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭ ಸಿನಿಮೀಯ ಮಾದರಿಯಲ್ಲಿ ಶೆಟ್ಟಿ ಅವರು ಮುಂದಿನ ಗಾಜನ್ನು ಒಡೆದು ಹೊರಬಂದಿದ್ದಾರೆ. ದೇಹಕ್ಕೆ ಸುಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ಈ ಭಾಗದಲ್ಲಿ ಒಂದೇ ಸಮನೆ ಬಿರುಸಾದ ಮಳೆ ಬೀಳುತ್ತಿದ್ದು, ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲಿ ಆಳವಾದ ಕಂದಕ, ಮುಂಭಾಗದಲ್ಲಿ ವಿದ್ಯುತ್ ಕಂಬ, ಎಡ ಭಾಗದಲ್ಲಿ ದೊಡ್ಡ ಹಾವಿನ ಹುತ್ತವಿತ್ತು. ಸ್ವಲ್ಪ ಯಾಮಾರಿದರೂ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಜನ ಸ್ಥಳಕ್ಕಾಗಮಿಸಿ ಕಾರನ್ನು ಮೆಲೆತ್ತಲು ಸಹಕರಿಸಿದರು. ನಾಗರಹಾವಿನ್ನು ರಕ್ಷಸಿದ್ದರಿಂದ ನಾಗದೇವರು ನಿಮ್ಮನ್ನು ರಕ್ಷಿಸಿದ್ದಾರೆ ಎನ್ನುವ ಮಾತು ಕೂಡಾ ಗುಂಪಿನಲ್ಲಿ ಕೇಳಿಬಂತು.

Leave a Reply

Your email address will not be published. Required fields are marked *

thirteen + 12 =