ಬೈಂದೂರು ಕಾಲೇಜಿಗೆ ಕೇಂದ್ರ ಗೃಹ ಇಲಾಖೆಯ ಪ್ರಶಂಸೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಭಾರತದ ವೀರನಿಧಿಗೆ (ಭಾರತ್ ಕೆ ವೀರ್ ಫಂಡ್) ರೂ ೪೬,೧೮೯ ದೇಣಿಗೆ ನೀಡುವ ಮೂಲಕ ದೇಶದ ಶೌರ್ಯಾಳುಗಳ ಅಪ್ರತಿಮ ತ್ಯಾಗವನ್ನು ಗೌರವಿಸಿದುದಕ್ಕಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಕೇಂದ್ರ ಗೃಹ ಸಚಿವಾಲಯ ಅಭಿನಂದಿಸಿದೆ. ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಂಭವಿಸಿದ ದೇಶದ ಸೈನಿಕರ ಬಲಿದಾನದಿಂದ ರಾಷ್ಟ್ರಭಕ್ತಿ ಪ್ರೇರಿತರಾದ ಕಾಲೇಜಿನ ವಿದ್ಯಾಥಿಗಳು ಕಾಲೇಜಿನಲ್ಲಿ ಆಹಾರೋತ್ಸವ ನಡೆಸುವ ಮೂಲಕ ಮತ್ತು ಊರಿನ ವಾರದ ಸಂತೆಯಲ್ಲಿ ವಿವಿಧ ಖಾದ್ಯ ಸಾಮಗ್ರಿಗಳನ್ನು ಮಾರುವ ಮೂಲಕ ಗಳಿಸಿದ ಲಾಭವನ್ನು ಸೈನಿಕರ ನಿಧಿಗೆ ಕಳುಹಿಸಿಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಗೃಹ ಮಂತ್ರಾಲಯ ತನ್ನೆಲ್ಲ ಸಶಸ್ತ್ರಬಲ ಕುಟುಂಬದ ಪರವಾಗಿ ೨೧ರಂದು ನೀಡಿದ ದೃಢೀಕರಣ ಪತ್ರದಲ್ಲಿ ಕಾಲೇಜಿನ ಈ ಕೊಡುಗೆಯನ್ನು ಪ್ರಶಂಸಿಸಿದೆ.

Call us

Call us

Visit Now

Leave a Reply

Your email address will not be published. Required fields are marked *

20 − twelve =