ಬೈಂದೂರು: ಕೋವಿಡ್ ಅಲೆ ನಿಯಂತ್ರಿಸಲು ಸರಕಾರ ವಿಫಲ – ಕಾಂಗ್ರೆಸ್‌ನಿಂದ ಜನಾಗ್ರಹ ಆಂದೋಲನ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಹಾಗೂ ಕೋವಿಡ್‌ನಿಂದಾಗಿ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಸಮರ್ಪಕ ಪರಿಹಾರ ಧನ ವಿತರಿಸಬೇಕು ಎಂದು ಆಗ್ರಹಿಸಿ ಜನಸಾಮಾನ್ಯರ ಧ್ವನಿಯಾಗಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಶಾಸಕರ ಕಚೇರಿ ಎದುರು ಜನಾಗ್ರಹ ಆಂದೋಲನದ ಪ್ರತಿಭಟನೆ ನಡೆಯಿತು.

Call us

ಈ ಸಂದರ್ಭ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸಾವನ್ನಪ್ಪುವಂತಾಗಿದೆ, ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿಯೇ ಜನ ಸಂಕಷ್ಟಪಡುವಂತಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಒದಗಿಸುವುದಾಗಿ ಘೋಷಿಸಿದ್ದರು, ಅದು ಏನೇನು ಸಾಲದು, ಮೃತಪಟ್ಟ ಕುಟುಂಬಗಳಿಗೆ ಕನಿಷ್ಠ ಐದು ಲಕ್ಷ ರೂ. ಪರಿಹಾರಧನ ವಿತರಿಸಬೇಕು ಎಂದು ಆಗ್ರಹಿಸಿದರು.

Call us

ದೇಶದಲ್ಲಿ ಸದ್ಯದಲ್ಲಿಯೇ ಕೊರೊನಾ ಮೂರನೇ ಅಲೆ ಅಪ್ಪಳಿಸುವುದಾಗಿ ತಜ್ಞರು ವರದಿ ಸಲ್ಲಿಸಿದರು, ಸರ್ಕಾರ ಇದುವರೆಗೂ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳಲ್ಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಶೀಘ್ರ ಹೆಚ್ಚುವರಿ ಆಸ್ಪತ್ರೆ ಹಾಗೂ ವೈದ್ಯರ ನೇಮಕಾತಿಗೆ ಸಂಬಂಧಪಟ್ಟಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೇ ಪಡಿತರ ವ್ಯವಸ್ಥೆಯಲ್ಲಿ ಗೊಂದಲ ಏರ್ಪಟ್ಟಿದೆ ಎಂದು ಕಿಡಿಕಾರಿದ ಅವರು ಇದರಿಂದಾಗಿ ಬಡ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ, ಶೀಘ್ರ ಮೊದಲಿನ ವ್ಯವಸ್ಥೆಯನ್ನೆ ಮುಂದುವರೆಯಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಸಂಪಿಗೇಡಿ ಸಂಜೀವ ಶೆಟ್ಟಿ, ಪ್ರದೀಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಶಾಸಕರ ಕಚೇರಿಯಿಂದ ತಾಲೂಕು ಕಚೇರಿಯ ತನಕ ಮೆರವಣೆಗೆ ನಡೆಸಿ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ, ತಹಶೀಲ್ದಾರ ಶೋಭಾ ಲಕ್ಷ್ಮಿಯವರಿಗೆ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *

7 − 5 =