ಬೈಂದೂರು: ಕ್ರೀಡಾ ಸಾಮಗ್ರಿಗಳ ವಿತರಣೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿದ್ಯಾರ್ಥಿಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಹೊರಹಾಕಲು ಅವಕಾಶಗಳ ಜೊತೆಯಲ್ಲಿ, ಪೂರಕ ಮತ್ತು ಸಮರ್ಪಕ ಪರಿಕರಗಳು ಕೂಡ ಅತೀ ಅವಶ್ಯ, ಆ ನಿಟ್ಟಿನಲ್ಲಿ ನಮ್ಮ ಕಾಲೇಜಿಗೆ ನೀಡಿದ ಕ್ರೀಡಾ ಸಾಮಗ್ರಿಗಳ ಕೋಡುಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದಲ್ಲದೆ, ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗದತ್ತ ಸೆಳೆಯಲು ಸಹಕಾರಿ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೈಂದೂರಿನ ಪ್ರಾಚಾರ್ಯರಾದ ಬಿ ಏ ಮೇಳಿಯವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯನ್ನು ಆಡಿದರು.

Call us

Call us

Click Here

Visit Now

ದಿವಂಗತ ವೆಂಕಟೇಶ ಅನಂತ ಪ್ರಭು ಪ್ರಭುಕೇರಿ ನಾಯ್ಕನಕಟ್ಟೆರವರ ಸ್ಮರಣಾರ್ಥ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಸಿ,ಎ.ಎನ್. ರಮಾನಂದ ಪ್ರಭು ಮಸ್ಕತ್ ಇವರು ದೇಣಿಗೆ ನೀಡಿದ ಕ್ರೀಡಾ ಸಾಮಗ್ರಿಗಳ ಸ್ವೀಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

Click here

Click Here

Call us

Call us

ಕಾರ್ಯಕ್ರಮದಲ್ಲಿ ಉದ್ಯಮಿಗಳು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಮುತ್ತಯ್ಯ ಪೂಜಾರಿ ಕಳವಾಡಿ, ಹಾಗೂ ಹರೀಶ ಬೈಂದೂರು ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದು, ಕ್ರೀಡಾ ಸಾಮಗ್ರಿಗನ್ನು ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾಲೇಜಿನ ಕ್ರೀಡಾ ಸಂಘದ ಸಂಚಾಲಕರಾದ ಪ್ರೋ ರಘು ನಾಯ್ಕರವರು ಪ್ರಸ್ತಾವಿಕ ನುಡಿಗಳೊಂದಿಗೆ, ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಶಿವಕುಮಾರ ವಂದನೆಗೈದರು.

Leave a Reply

Your email address will not be published. Required fields are marked *

two + seven =