ಬೈಂದೂರು, ಗಂಗೊಳ್ಳಿ, ಕುಂದಾಪುರದಲ್ಲಿ ರಾಜ್ಯ ಸರಕಾರದ ಹಿಂದು ವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಹಿಂದೂ ಚಳವಳಿಯನ್ನು ಹತ್ತಿಕ್ಕುವ, ಹಿಂದು ನಾಯಕರ ಮೇಲೆ ದಬ್ಬಾಳಿಕೆಯನ್ನು ನಡೆಸುವ, ಹಿಂದು ಸಾಮಾಜಿಕ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯ, ಕಿರುಕುಳವನ್ನು ಎಸಗುವ, ಹಿಂದು ಧಾರ್ಮಿಕ, ಸಾಮಾಜಿಕ ಆಚರಣೆಗಳಿಗೆ ನೀತಿ-ನಿರ್ಬಂಧಗಳನ್ನು ಹೇರಿ ಅಡೆ-ತಡೆಗಳನ್ನು ಒಡ್ಡುತ್ತಿರುವ ರಾಜ್ಯ ಸರಕಾರ ಹಿಂದು ವಿರೋಧಿ ಧೋರಣೆಯನ್ನು ಅನುಸರಿಸುತ್ತಿದೆ. ಯಾವುದೇ ತಪ್ಪು ಮಾಡದ, ದ್ರೋಹ ಎಸಗದ ಹಿಂದು ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುತ್ತಿರುವ ಸರ್ಕಾರದ ಧೋರಣೆ ಖಂಡನೀಯ ಎಂದು ಬಜರಂಗ ದಳದ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಹೇಳಿದರು.

Call us

Click Here

Click here

Click Here

Call us

Visit Now

Click here

ಹಿಂದು ಜಾಗರಣ ವೇದಿಕೆ ಗಂಗೊಳ್ಳಿ ಘಟಕದ ಆಶ್ರಯದಲ್ಲಿ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ಬಸ್ ನಿಲ್ದಾಣದ ಎದುರು ರಾಜ್ಯ ಸರಕಾರ ಹಿಂದು ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಳೆದ ೬೦ ವರ್ಷಗಳಲ್ಲಿ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿರುವ ಸರಕಾರ ಮತ್ತು ಮುಖ್ಯಮಂತ್ರಿಗಳು ಬರಲಿಕ್ಕೆ ಸಾಧ್ಯವಿಲ್ಲ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ವಿತ್ವಕ್ಕೆ ಬಂದ ಮೇಲೆ ಗೋಹತ್ಯಾ ನಿಷೇಧ ಕಾನೂನನ್ನು ಹಿಂಪಡೆದು ಗೋ ಕಳ್ಳತನ, ಗೋಹತ್ಯೆ ಹಾಗೂ.ಗೋಹಂತಕರಿಗೆ ನೇರವಾಗಿ ಸಹಾಯ ಮಾಡಿತು. ಪಿಎಫ್‌ಐ ಹಾಗೂ ಕೆಎಫ್‌ಡಿ ಕಾರ್ಯಕರ್ತರ ಮೇಲಿನ ಕೇಸನ್ನು ಹಿಂಪಡೆದು, ಹಿಂದು ಸಂಘಟನೆಗಳ ಕಾರ್ಯಕರ್ತರ ಮೇಲೆ ಕೇಸು ದಾಖಲಿಸುವ ಮೂಲಕ ದ್ವಿಮುಖ ನೀತಿ ಅನುಸರಿಸುತ್ತಿದೆ. ಮೌಢ್ಯದ ಹೆಸರಿನಲ್ಲಿ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಹಿಂದುತ್ವದ ಕೆಲಸಗಳಿಗೆ ಅಡ್ಡಿಪಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಸುತ್ತಿರುವ ರಾಜ್ಯ ಸರ್ಕಾರ ಮುಸ್ಲಿಮರ ಮತ್ತು ಕ್ರಿಶ್ಚಿಯನ್ನರ ಆಚರಣೆಗಳ ಬಗ್ಗೆ ಮೌಢ್ಯ ಪ್ರತಿಬಂಧಕ ಕಾಯ್ದೆಯಲ್ಲಿ ಯಾವುದೇ ಮಾತುಗಳಿಲ್ಲ ಎಂದು ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಧರ್ಮ, ದೇಶ, ಸಂಸ್ಕೃತಿಗೋಸ್ಕರ ಕಾರ್ಯನಿರ್ವಹಿಸುತ್ತಿರುವ ಹಿಂದು ಪರ ಸಂಘಟನೆಗಳು ಯಾವುದೇ ದೇಶದ್ರೋಹ, ಸಮಾಜದ್ರೋಹ ಕೆಲಸಗಳಲ್ಲಿ ತೊಡಗಿಸಿಕೊಂಡಿಲ್ಲ. ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಗಳು ರಾಜ್ಯದಲ್ಲಿ ಜಿಹಾದಿ ಭಯೋತ್ಪಾದನೆಯನ್ನು ಸೃಷ್ಟಿಸಿ ಕರ್ನಾಟಕವನ್ನು ಇನ್ನೊಂದು ಕಾಶ್ಮೀರವನ್ನಾಗಿ ಮಾಡಲು ಹವಣಿಸುತ್ತಿದೆ. ದೇಶದ್ರೋಹ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಪಿಎಫ್‌ಐ ಸಂಘಟನೆ ರಾಜ್ಯದಲ್ಲಿ ಕಾಶ್ಮೀರದ ಮಾನಸಿಕತೆಯನ್ನು ತರುವ ಪ್ರಯತ್ನ ನಡೆಸುತ್ತಿದೆ. ಹಿಂದುಗಳಲ್ಲಿ ಭಯ ಹುಟ್ಟಿಸಿ ರಾಜ್ಯವನ್ನು ಇಸ್ಲಾಮೀಕರಣಗೊಳಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದ್ದು ರಾಜ್ಯ ಸರ್ಕಾರ ಇಂತಹ ಕೆಲಸಗಳಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಎಂದು ಸರ್ಕಾರ ನಿಲುವನ್ನು ಅವರು ತೀವ್ರವಾಗಿ ಖಂಡಿಸಿದರು.

ಜಗದೀಶ ಕಾರಂತರು ಯಾವುದೇ ತಪ್ಪು ಮಾಡದೇ ಇದ್ದರೂ ಅವರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವ ಪ್ರಯತ್ನ ನಡೆಯುತ್ತಿದೆ. ಹಿಂದು ಸಂಘಟನೆಗಳ ಅಮಾಯಕ ಕಾರ್ಯಕರ್ತರ ಹತ್ಯೆಗಳು ನಡೆದಿದ್ದರೂ ಸರ್ಕಾರ ಕಠಿಣ ಕ್ರಮಕೈಗೊಂಡಿಲ್ಲ. ಹಿಂದು ಸಂಘಟನೆಗಳ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಹಾಕಿದ ಕೇಸುಗಳು ನಮಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ ಮತ್ತು ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಇಂತಹ ಕೇಸುಗಳಿಂದ ಹಿಂದು ಸಮಾಜದ ಸದ್ದು ಅಡಗಿಸಲು ಸಾಧ್ಯವಿಲ್ಲ. ಯಾವುದೇ ಸಮಾವೇಶ ಮಾಡಿದರೂ, ಕೇಸು ದಾಖಲಿಸಿದರೂ ಹಿಂದು ಮುಖಂಡ ಹತ್ಯೆ ಮರೆಯಲು ಸಾಧ್ಯವಿಲ್ಲ. ಹಿಂದು ಭಾವನೆಗಳಿಗೆ ಧಕ್ಕೆ ತರುವ ಕೆಲಸ ಜಿಹಾದಿ ಮನೋಭಾವವುಳ್ಳವರು ಮಾಡುತ್ತಿದ್ದು, ಇದನ್ನೆಲ್ಲಾ ಮೆಟ್ಟಿ ನಿಲ್ಲಲು ಹಿಂದು ಸಮಾಜ ಜಾಗೃತಿ ಆಗಬೇಕು. ಹಿಂದು ಸಮಾಜ ಸದೃಢವಾಗಬೇಕು. ಹಿಂದು ಸಂಘಟನೆಗಳು ಒಂದಾಗಿ ಸಮಾಜ ಉಳಿವಿಗೆ ಮುಂದಾಗಬೇಕು ಎಂದು ಅವರು ಹೇಳಿದರು. ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಅಧ್ಯಕ್ಷ ಗೋವಿಂದ್ರಾಯ ಶೇರುಗಾರ್ ಸ್ವಾಗತಿಸಿದರು. ನವೀನ್ ದೊಡ್ಡಹಿತ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Call us

ಕುಂದಾಪುರ: ಪಂಚಾಯತ್ ಕಚೇರಿ ಮುಂಭಾಗ ವಿಶ್ವಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ, ಬಜರಂಗ ದಳ ಆಶ್ರಯದಲ್ಲಿ ಕುಂದಾಪುರ ತಾಲೂಕು ನೇತೃತ್ವದಲ್ಲಿ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ನಡೆದ ಪ್ರತಿಭಟನಾ ಸಭೆ ನಡೆಯಿತು. ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ ರಾಜ್ಯ ಕಾಂಗ್ರೆಸ್ ಸರಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚಿವ ಕೆಲಸ ಮಾಡುತ್ತಿದೆ. ಹಿಂದುಗಳ ಮೇಲೆ ಗೂಂಡಾ ಕಾಯಿದೆ ಗಡಿಪಾರು ಮುಂತಾದ ಒತ್ತಾಯದ ಶಿಕ್ಷೆ ಹೇರುವ ಮೂಲಕ ಸಂಘಟನೆಗಳ ಸ್ವರ ಉಡಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಪಿಎಫ್‌ಐ, ಕೆಡಿಎಫ್ ಲೌವ್ ಜಿಹಾದ ಮೂಲಕ ಹಿಂದೂ ಯುವತಿಯರ ಮತಾಂತರ ಮಾಡುತ್ತಿದ್ದು, ಉಡುಪಿ ಹಾಗೂ ದಕ ಜಿಲ್ಲೆಯಲ್ಲಿ ಕಾಶ್ಮೀರಿ ಜಿಹಾದಿ ಪರೀಸ್ಥಿತಿ ಇದೆ. ಇದನ್ನು ಖಂಡಿಸದ ಸಂಘಟನೆ ಮುಖಂಡರ ವಿರುದ್ದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಹಿಂದೂ ಸಂಘಟನೆ ಪ್ರಮುಖರಾದ ವಿಟ್ಲ ಗಣರಾಜ್ ಭಟ್ ಕೆದಿಲಾಯ, ಕಾರ್ಕಳ ಪ್ರಶಾಂತ್ ನಾಯಕ್, ಸುರೇಂದ್ರ ಕೋಟೇಶ್ವರ ಇದ್ದರು.

ಬೈಂದೂರು: ಇಲ್ಲಿನ ಬೈಪಾಸ್ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.

ಈ ಸಂದರ್ಭ ಮಾತನಾಡಿದ ವಿಶ್ವಹಿಂದೂ ಪರಿಷತ್ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಮಾತನಾಡಿ ಹಿಂದೂ ಕಾರ್ಯಕರ್ತರ ಮೇಲೆ ರಾಜ್ಯ ಕಾಂಗ್ರೆಸ್ ಪಕ್ಷ ದ್ವೇಷ ಸಾಧಿಸುತ್ತಿದೆ. ಹಿಂದೂ ಜಾಗರಣಾ ವೇದಿಕೆಯ ಪರಮೋಚ್ಚ ನಾಯಕ, ಪ್ರಖರ ವಾಗ್ಮಿ ಜಗದೀಶ್ ಕಾರಂತರನ್ನು ಬಂಧಿಸಿ ಹಿಂದೂ ಕಾರ್ಯಕರ್ತರ ಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ ಗುರುಪ್ರಸಾದ ಶೆಟ್ಟಿ, ತಾಲೂಕು ಸಂಚಾಲಕ ನಿತ್ಯಾನಂದ ಉಪ್ಪುಂದ, ಬೈಂದೂರು ವಿಶ್ವಹಿಂದೂ ಪರಿಷತ್ ಉಪಾಧ್ಯಕ್ಷ ಮಂಗೇಶ್ ಶ್ಯಾನಭಾಗ್, ಉಪ್ಪುಂದ ಘಟಕದ ಅಧ್ಯಕ್ಷ ನೆಲ್ಯಾಡಿ ಸುಧಾಕರ ಶೆಟ್ಟಿ, ಯಳಜಿತ್ ಘಟಕದ ಅಧ್ಯಕ್ಷ ಗುರುಪ್ರಸಾದ ಶ್ಯಾನಭಾಗ್, ಮೊವಾಡಿ ಶರತ್ ಹಿಂದೂ ಜಾಗರಣ ವೇದಿಕೆ ತಾಲೂಕು ಸಹಯೋಜಕ ರಾಜೇಶ್ ಆಚಾರ್, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾದ ಮಹೇಶ್ ಆಚಾರ್, ಚರಣ್ ದೇವಾಡಿಗ, ಶ್ರೀಧರ ದೇವಾಡಿಗ, ಧನ್ಯ ಕುಮಾರ್, ವಿನಯ ದೇವಾಡಿಗ ಮೊದಲಾದವರು ಇದ್ದರು.

 

Leave a Reply

Your email address will not be published. Required fields are marked *

3 × 3 =