ಬೈಂದೂರು ಗಾಣಿಗ ಯುವ ಸಂಘಟನೆ ಅಶ್ರಯದಲ್ಲಿ ‘ಗಾಣಿಗ ಯುವ ಸಂಗಮ 2017’

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದ ವಿವಿಧೆಡೆಗಳಲ್ಲಿ ನೆಲೆಸಿರುವ ಗಾಣಿಗ ಸಮಾಜದ ಯುವಕರನ್ನು ಮುಖಾಮುಖಿಯನ್ನಾಗಿಸಿ ಪರಸ್ಪರ ಭಾಂದವ್ಯ ಬೆಸೆಯುವ, ಸಮಾಜದ ಏಳಿಗೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನದಲ್ಲಿ ಬೈಂದೂರು ವಲಯ ಗಾಣಿಗ ಯುವ ಸಂಘಟನೆ ಸಕ್ರಿಯವಾಗಿದ್ದು, ಗಾಣಿಗ ಯುವ ಸಂಗಮ ೨೦೧೭ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಹಾಗೂ ಕಾಲಮಿತಿ ಯಕ್ಷಗಾನ ಆಯೋಜಿಸಿದೆ.

Call us

Call us

ಬೈಂದೂರಿನ ಗಾಂಧಿ ಮೈದಾನದಲ್ಲಿ ಮೇ 13 ಹಾಗೂ 14ರಂದು ಗಾಣಿಗ ಸಮಾಜ ಬಾಂಧವರಿಗಾಗಿ ರಾಜ್ಯ ಮಟ್ಟದ 60 ಗಜಗಳ ಕ್ರಿಕೆಟ್ ಪಂದ್ಯಾಟ ಹಾಗೂ ಮೇ 14ರಂದು ಗಾಣಿಗ ಸಮಾಜದ ಯಕ್ಷ ದಿಗ್ಗಜರ ಕೂಡುವಿಕೆಯಲ್ಲಿ ಚಕ್ರಚಂಡಿಕಾ ಕಾಲಮಿತಿ ಯಕ್ಷ ಸಂಭ್ರಮ ಜರುಗಲಿದ್ದು ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.

Leave a Reply

Your email address will not be published. Required fields are marked *

four + 4 =