ಬೈಂದೂರು: ಗೃಹ ರಕ್ಷಕ ದಳದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಗೃಹ ರಕ್ಷಕ ದಳ ಬೈಂದೂರು ಘಟಕದ ವತಿಯಿಂದ ಬೈಂದೂರು ತಾಲೂಕು ನ್ಯಾಯಾಲಯದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Call us

Call us

ಬೈಂದೂರು ತಾಲ್ಲೂಕು ಜೆ ಎಮ್ ಎಫ್ ಸಿ ಮತ್ತು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಜ್ಞಾನೇಶ್ ಮುಗುಳಿ ಮಾತನಾಡಿ ಗೃಹ ರಕ್ಷಕರಿಗೆ ರಾಷ್ಟ್ರ ಧ್ವಜ ನೀಡಿ ರಾಷ್ಟ್ರ ಪ್ರೇಮದೊಂದಿಗೆ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಳ್ಳುವಂತೆ ಗೃಹ ರಕ್ಷಕರಿಗೆ ಕರೆ ನೀಡಿದರು.

Call us

Call us

ಈ ಸಂದರ್ಭದಲ್ಲಿ ಎಪಿಪಿ ವರ್ಷಾ ಆರ್ ಶೆಟ್ಟಿ, ಸರ್ಕಾರಿ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕಿ ಜಯಶ್ರೀ, ಹೆಡ್ ಕಾನ್ಸ್ ಟೇಬಲ್ ರಾಮಚಂದ್ರ ಎಸ್, ಶ್ರೀ ಮಂಜುನಾಥ ಎ ಕೊಲ್ಲೂರು, ಮೌನೇಶ್ ಗಂಗೊಳ್ಳಿ, ಬೈಂದೂರು ಪೊಲೀಸ್ ಠಾಣಾ ಮಹಿಳಾ ಸಿಬ್ಬಂದಿ ವಸಂತಿ ಹಾಗೂ ಬೈಂದೂರು ಗೃಹ ರಕ್ಷಕ ದಳ ಘಟಕದ ಗೃಹ ರಕ್ಷಕರು ಹಾಗೂ ಗೃಹ ರಕ್ಷಕಿಯರು ಹಾಜರಿದ್ದರು.

ಬೈಂದೂರು ಗೃಹ ರಕ್ಷಕ ದಳ ಘಟಕದ ಘಟಕಾಧಿಕಾರಿಗಳಾದ ರಾಘವೇಂದ್ರ ಎನ್. ಅಥಿತಿಗಳನ್ನು ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

8 − 5 =