ಬೈಂದೂರು: ಜಯ ಕರ್ನಾಟಕ ತಾಲೂಕು ಹಾಗೂ ವಲಯ ಘಟಕ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಯ ಕರ್ನಾಟಕ ತಾಲೂಕು ಘಟಕ, ವಲಯ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು.

ಜಯ ಕರ್ನಾಟಕದ ಜಿಲ್ಲಾ ಪ್ರದಾನ ಸಂಚಾಲಕ ಅಣ್ಣಪ್ಪ ಕುಲಾಲ್ ಸಮಾರಂಭ ಉದ್ಘಾಟಿಸಿ ಮಾತನಾಡಿ ಯುವಕರ ಸಂಘಟನೆಗಳ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾನತೆ, ಭ್ರಾತೃತ್ವ ಮತ್ತು ಸಾಮರಸ್ಯದ ಸಂಕೇತವೇ ಜಯ ಕರ್ನಾಟಕ ಸಂಘಟನೆ. ಸಮಾಜದಲ್ಲಿ ನೊಂದವರ, ನಿರ್ಗತಿಕರ ಸೇವೆಗಾಗಿ ಜಯಕರ್ನಾಟಕ ಸಂಘಟನೆಯನ್ನು ಅಸ್ಥತ್ವಕ್ಕೆ ತರಲಾಯಿತು. ಆದರೆ ಬೈಂದೂರಿನಲ್ಲಿ ಜಯ ಕರ್ನಾಟಕ ಸಂಘಟನೆ ಮಾಡುವುದನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದ್ದೆ. ಜಯ ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದವರು ಇದರಲ್ಲಿ ಇಲ್ಲ, ನಾವು ರಾಜಕೀಯದವರ ಪರವಾಗಿಲ್ಲ ಕೇವಲ ಸಂಘಟನೆಯ ಪರವಾಗಿ ಹಾಗೂ ನೊಂದವರ ಪರವಾಗಿ ಇದ್ದೇವೆ. ಮುಂದಿನ ದಿನಗಳಲ್ಲಿ ಬೈಂದೂರಿನಲ್ಲಿ ಜಯ ಕರ್ನಾಟಕ ವತಿಯಿಂದ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡಬೇಕು. ನೊಂದವರ ಬಾಳಿಗೆ ನಾವು ಬೆಳಕು ತೊರಿಸಬೇಕು ಇದು ನಮ್ಮ ಸಿದ್ಧಾಂತ.

ಜಯ ಕರ್ನಾಟಕ ಸಂಘಟನೆ ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು, ಹೋಬಳಿ, ವಲಯ ಸೇರಿದಂತೆ ಎಲ್ಲಾ ಕಡೆಗೆ ಸಂಘಟನೆಯ ಶಾಖೆಗಳನ್ನು ತೆರೆದು ಲಕ್ಷಾಂತರ ಕಾರ್ಯಕರ್ತರನ್ನು ಹೊಂದಿಗೆ. ಈ ಸಮಾಜಕ್ಕೆ ಸಮಾನತೆಯ ಅವಶ್ಯಕತೆ ಇದೆ. ಹೋರಾಟಗಳಿಂದಲೇ ನಾವು ಅಭಿವೃದ್ಧಿ ಕಾಣಲು ಸಾಧ್ಯ ಎಂದರು. ಜಯ ಕರ್ನಾಟಕದ ಜಿಲ್ಲಾಧ್ಯಕ್ಷ ಹಾಗೂ ಆಶ್ರಯದಾಮ ಯೂನಿಯನ್ ಅಧ್ಯಕ್ಷ ರಮೇಶ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾತನಾಡಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸಮಾಜದ ಒಳಿತಿಗಾಗಿ ಬಡ ಹಾಗೂ ನೊಂದ ಕುಟುಂಬಗಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು. ಅಂದಾಗ ಮಾತ್ರ ಸಂಘಟನೆಯ ಸ್ಥಾಪನೆಯ ಉದ್ದೇಶ ಸಾರ್ಥಕವಾಗುವುದು. ನಾವು ಯಾರಿಗೂ ಹೆದರಿ ಹಿಂದೆ ಹೋಗಬೇಕಾಗಿಲ್ಲ, ನಾವುಗಳು ಧೈರ್ಯದಿಂದ ಯಾವುದೇ ಕೆಲಸಗಳನ್ನು ಮಾಡುವ ಶಕ್ತಿಯಿದೆ. ಜಯ ಕರ್ನಾಟಕದ ಶಾಲುಗಳು ಪ್ರತಿಯೊಬ್ಬರ ಮನೆಯಲ್ಲಿ ಇದ್ದರೇ ಯಾವ ವ್ಯಕ್ತಿಯೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಹಾಗೇ ಸಮಾಜದಲ್ಲಿ ಅರಿವು ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ನಮ್ಮ ಸಂಘಟನೆಯಿಂದ ನಡೆಸಲಾಗಿದೆ, ಇದರ ಜೊತೆಗೆ ನಾಗರಿಕರ ಪಾತ್ರ ಬಹು ದೊಡ್ಡದು ಎಂದರು.

ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾ ಉಪಾಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರಭದ್ರ ಗಾಣಿಗ, ರಾಜ್ಯ ಸಂಚಾಲಕರ ಸತೀಶ್ ಪೂಜಾರಿ, ಗೌರವ ಸಲಹೆಗಾರ ಸುಧಾಕರ್ ರಾವ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಜಿಲ್ಲಾ ಉಪಾಧ್ಯಕ್ಷ ಶರತ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಅಕ್ಬರ್ ಬಾಷಾ, ಬ್ರಹ್ಮಾವರ ಜಿಲ್ಲಾ ಉಪಾಧ್ಯಕ್ಷ ಮಾರ್ಕ್ಸ ಡಿ’ಸೋಜಾ, ಜಿಲ್ಲಾ ಮಾಧ್ಯಮ ವಕ್ತಾರ ಶ್ರೀನಿವಾಸ ಶೆಟ್ಟಿ ತೋನ್ಸೆ, ಜಿಲ್ಲಾ ಮಹಿಳಾಧ್ಯಕ್ಷೆ ವೇದಾವತಿ ಪ್ರತಾಪ್‌ಚಂದ್ರ ಹೆಗ್ಡೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕರುಣಾಕ ಮಾರ್ಪಳ್ಳಿ, ಉದ್ಯಾವರ ಮಹಿಳಾ ಪ್ರದಾನ ಕಾರ್ಯದರ್ಶಿ ಜಯಶ್ರೀ ಶಿವರಾಮ, ಕುಂದಾಪುರ ತಾಲೂಕು ಅಧ್ಯಕ್ಷ ದಿನಕರ್ ಶಾಸ್ತ್ರಿ, ಉಡುಪಿ ನಗರ ಅಂಗಡಿ ಮಾಲಕರ ಘಟಕದ ಅಧ್ಯಕ್ಷ ಯಶೋಧರ್ ಭಂಡಾರಿ, ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಮಾಣಿಕ್ಯ ಹೋಬಳಿದಾರ್, ಪ್ರದಾನ ಕಾರ್ಯದರ್ಶಿ ಸುರೇಶ್ ದೇವಾಡಿಗ ಬೆಸ್ಕೂರು, ಉಪಾಧ್ಯಕ್ಷ ಉಮೇಶ್ ದೇವಾಡಿಗ ಬಂಕೇಶ್ವರ, ಸಂಘಟನೆಯ ಖಜಾಂಚಿ ಸುಬ್ರಹ್ಮಣ್ಯ ಬಿಜೂರು, ಸಂಘಟನೆಯ ಪ್ರದಾನ ಸಂಚಾಲಕ ಶಬ್ಬೀರ್ ಯೋಜನಾನಗರ, ಬೈಂದೂರು ವಲಯದ ಅಧ್ಯಕ್ಷ ರಾಘವೇಂದ್ರ ಪೂಜಾರಿ ಯಡ್ತರೆ ಉಪಸ್ಥಿತರಿದ್ದರು. ಬೈಂದೂರು ತಾಲೂಕು ಸಂಘಟನೆಯ ಕಾರ್ಯದರ್ಶಿ ಸುರೇಶ್ ದೇವಾಡಿಗ ಬೆಸ್ಕೂರು ಸ್ವಾಗತಿದರು, ಸುಬ್ರಹ್ಮಣ್ಯ ಜಿ.ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿ/ವಂದಿಸಿದರು.

Leave a Reply

Your email address will not be published. Required fields are marked *

18 − 8 =