ಬೈಂದೂರು ಜ್ಯೂನಿಯರ್ ಕಾಲೇಜು: ಪೋಷಕರ ಸಭೆ

Call us

ಬೈಂದೂರು: ಇಲ್ಲಿನ ಸರಕಾರಿ ಪೌಢಶಾಲೆಯ ಪಾಲಕರ ಸಭೆ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿತು.  ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಬಗೆಗೆ ಪಾಲಕರೊಂದಿಗೆ ಚರ್ಚಿಸಲಾಯಿತು.

ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಕಾಳಜಿ ವಹಿಸಬೇಕು. ಹೆತ್ತವರು ಹಾಗೂ ಶಿಕ್ಷಕರು ಸಮಾನ ಆಸಕ್ತಿ ತೋರಿದಲ್ಲಿ ವಿದ್ಯಾರ್ಥಿಗೆ ಆತ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು.

Call us

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ರಾಜು ಪೂಜಾರಿ, ಕಾಂಗ್ರೆಸ್ ಮುಖಂಡರಾದ ಬಿ. ಎಂ. ನಾಗರಾಜ್, ರಂಗಕರ್ಮಿ ಗಣೇಶ್ ಕಾರಂತ, ಉಪನ್ಯಾಸಕ ಮಣಿಕಂಠ ದೇವಾಡಿಗ, ಪೊಷಕ ಪ್ರಮುಖರು ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ಪ್ರೌಡಶಾಲಾ ವಿಭಾಗದ ಉಪಪ್ರಾಂಶುಪಾಲೆ ಜ್ಯೋತಿ ಸ್ವಾಗತಿಸಿದರು. ಸಂತೋಷ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

three + 14 =