ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಕ್ಷಿತಿಜ ಇಕೋ ಕ್ಲಬ್ ಇವರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕ್ಷಿತಿಜ ಇಕೋ ಕ್ಲಬ್ನ ಸಂಚಾಲಕಿ ಹಾಗೂ ಶಿಕ್ಷಕಿ ಮುಕ್ತಾ .ಬಿ ನಾಯ್ಕ ಪ್ರಾಸ್ತಾವಿಕ ಭಾಷಣದಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗುತ್ತಿದ್ದು ಅವುಗಳನ್ನು ಸುಟ್ಟು ಹಾಕಿದರು ಅದರಿಂದ ಕೆಟ್ಟ ವಾಸನೆಗಳು ನಮ್ಮ ದೇಹಕ್ಕೆ ಹರಡುತ್ತದೆ. ಇದರಿಂದ ನಮಗೆ ನಾನಾ ರೀತಿಯ ಕಾಯಿಲೆಗಳು ಉಂಟಾಗುವ ಸಂಭವ ಇರುತ್ತದೆ ಎಂದರು. ಹಾಗೇ ಇತ್ತೀಚ್ಚಿನ ದಿನಗಳಲ್ಲಿ ಗಿಡಮರಗಳ ಸಂಖ್ಯೆಗಳು ಕಡಿಮೆಯಾಗುತ್ತಿದ್ದು, ಮರಗಿಡಗಳಿಂದ ತಂಪಾದ ಗಾಳಿಗಳಿಂದ ನಮ್ಮ ಮನಸು ಹಗುರ ವಾಗುತ್ತದೆ. ಆದರೆ ಮರಗಿಡ ಇಲ್ಲ. ನಾವೂ ಸಮಾರಂಭಗಳಿಗೆ ಕೊಡುಗೆಗಳನ್ನು ನೀಡುತ್ತೇವೆ ಆದರೆ ಪರಿಸರಕ್ಕೆ ಯಾವುದೇ ಕೊಡುಗೆ ಗಳನ್ನು ನೀಡುವುದಿಲ್ಲಾ, ಅವುಗಳು ಮಾತ್ರ ನಮಗೆ ತಂಪಾದ ಗಾಳಿ, ಹಣ್ಣುಗಳನ್ನು, ಕಾಯಿಗಳನ್ನು ಕೊಡುತ್ತದೆ. ನಾವು ಕನಿಷ್ಟ ಮನೆಗಳಲ್ಲಿ ಒಂದು ಗಿಡಗಳನ್ನು ಬೆಳಸಬೇಕು ಎಂದರು.
ಈ ಸಂದರ್ಭದಲ್ಲಿ ಮಂಜುನಾಥ ಪಟಗಾರ್, ಯಶೋಧ ಟೀಚರ್, ಸಂತೋಷ ಭಂಡಾರಿ ಮೊದಲಾದವರು ಉಪಸ್ಥಿದ್ದರು. ರವೀಂದ್ರ ಪಿ ಕಾರ್ಯಕ್ರಮ ನಿರೂಪಿಸಿದರು, ವಂದಿಸಿದರು.