ಬೈಂದೂರು ತಾಲೂಕಿನಲ್ಲಿ ಗೋಶಾಲೆಗೆ ಜಾಗ ಮೀಸಲಿರಿಸಲು ವಿಹಿಂಪ – ಭಜರಂಗದಳ ಸಚಿವರಿಗೆ ಮನವಿ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ತಾಲೂಕಿನಲ್ಲಿ ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಾಗವನ್ನು ಮೀಸಲಿರಿಸಿ ಮಂಜೂರು ಮಾಡಬೇಕೆಂದು ವಿಶ್ವಹಿಂದೂ ಪರಿಷತ್ – ಭಜರಂಗದಳ ಬೈಂದೂರು ಪ್ರಖಂಡದ ವತಿಯಿಂದ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

Call us

Call us

Call us

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಬಿಜೂರು ಮಾತನಾಡಿ, ಬೈಂದೂರು ತಾಲೂಕಿನಲ್ಲಿ ಈವರೆಗೆ ಗೋಶಾಲೆ ಮಂಜೂರಾಗಿಲ್ಲ. ಗೋ ಮಾಳ ಉಳ್ಳವರ ಪಾಲಾಗುತ್ತಿದ್ದು ಸರಿಯಾಗಿ ಬಳಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಜಾನುವಾರುಗಳಿಗೆ ಶಾಶ್ವತ ನೆಲೆ ಇಲ್ಲದಂತಾಗಿದೆ. ಜಾನುವಾರುಗಳು ಎಲ್ಲೆಂದರಲ್ಲಿ ಓಡಾಡುವುದರಿಂದ ಅಪಘಾತಗಳು ಹೆಚ್ಚುತ್ತಿದೆ, ಬೆಳೆ ಹಾನಿಯಾಗಿ ಕೃಷಿಕರಿಗೆ ನಷ್ಟವಾಗುತ್ತಿದೆ. ರಾತ್ರಿ ಸಮಯದಲ್ಲಿ ಬೀಡಾಡಿ ಗೋವುಗಳನ್ನು ಕದ್ದು ಸಾಗಿಸುತ್ತಿದ್ದು ಗೋವುಗಳ ವಿನಾಶವಾಗುತ್ತಿದೆ. ರಕ್ಷಿಸಲ್ಪಟ್ಟ ಜಾನುವಾರುಗಳು, ಬೀಡಾಡಿ ಜಾನುವಾರುಗಳನ್ನು ದೂರದ ನೀಲಾವರ ಗೋಶಾಲೆಗೆ ಸಾಗಿಸಲು ಸಾಗಾಟ ವೆಚ್ಚ ಹೆಚ್ಚುತ್ತಿದೆ. ಹಾಗಾಗಿ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಮೂಲಕ ನಿರ್ವಹಣೆ ಮಾಡಲು ಗೋ ಶಾಲೆ ನಿರ್ಮಾಣಕ್ಕಾಗಿ ಐವತ್ತು ಎಕರೆ ಜಮೀನು ಮಂಜೂರಾತಿಗೆ ಕೋರಿದ್ದು, ಅದನ್ನು ಶೀಘ್ರ ಮಂಜೂರು ಮಾಡುವಂತೆ ವಿನಂತಿಸಿದರು.

Call us

Call us

ಈ ಸಂದರ್ಭ ಬೈಂದೂರು ತಾಲೂಕು ವಿಶ್ವ ಹಿಂದೂ ಪರಿಷತ್ ಭಜರಂಗದಳದ ಸಂಚಾಲಕ ಸುಧಾಕರ ನೈಲಾಡಿ, ವಿಶ್ವ ಹಿಂದೂ ಪರಿಷತ್ ಬೈಂದೂರು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಮುದೂರು, ಶಿರೂರು ಅಳಿವೆಗದ್ದೆ ಘಟಕದ ಸಂಚಾಲಕ ಕಾರ್ತಿಕ್, ತ್ರಾಸಿ ಘಟಕದ ಸಂಚಾಲಕ ಕಿರಣ್ ಆನಗೋಡು, ಸಾಪ್ತಾಹಿಕ ಮಿಲನ್ ಪ್ರಮುಖ್ ಶರತ್ ಮೋವಾಡಿ, ಪಡುವರಿ ಘಟಕದ ಅಧ್ಯಕ್ಷ ಗುರುರಾಜ್ ಕಲ್ಗಂಟ, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

4 × five =