ಬೈಂದೂರು ಬಂಟರ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಬಂಟರ ಯಾನೆ ನಾಡವ ಸಂಘದ ನೇತೃತ್ವದಲ್ಲಿ ಬೆಂಗಳೂರು ಬಂಟರ ಸಂಘದ ಸಹಭಾಗಿತ್ವದೊಂದಿಗೆ ನಡೆದ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

Call us

Call us

Click Here

Visit Now

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಮರನಾಥ ಶೆಟ್ಟಿ ಮೂಡಬಿದ್ರೆ, ಬೆಂಗಳೂರು ಸಂಘದ ಖಜಾಂಚಿ ಅನಂದರಾಮ ಶೆಟ್ಟಿ, ವಿದ್ಯಾರ್ಥಿ ವೇತನ ಸಮಿತಿ ಅಧ್ಯಕ್ಷ ರಮಿತ್ ಬಿ. ಶೆಟ್ಟಿ, ಉಪ್ಪುಂದ ಸೀತಾರಾಮ ಶೆಟ್ಟಿ, ಡಾ ಮಾಧವ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಡಾ. ಸಉಧಾಕರ ಹೆಗ್ಡೆ, ಉಪಾಧ್ಯಕ್ಷರುಗಳಾದ ನೆಲ್ಯಾಡಿ ಶೀವರಾಮ ಶೆಟ್ಟಿ, ಚುಚ್ಚಿ ನಾರಾಯಣ ಶೆಟ್ಟಿ, ಬೆಲ್ತೂರು ವಿಠಲ ಶೆಟ್ಟಿ, ನಾಕಟ್ಟೆ ಜಗನ್ನಾಥ ಶೆಟ್ಟಿ, ಸಾಲ್ಗದ್ದೆ ವಸಂತ ಹೆಗ್ಡೆ, ಸಂಘಟನಾ ಕಾರ್ಯದರ್ಶಿ ಶಶಿಧರ ಶೆಟ್ಟಿ, ಮಹಿಳಾ ವೇದಿಕೆ ಸಂಚಾಲಕಿ ಶಿಲ್ಪಾ ಸತೀಶ್ ಶೆಟ್ಟಿ ವೇದಿಕೆಯಲ್ಲಿದ್ದರು.

Click here

Click Here

Call us

Call us

ಈ ಸಂದರ್ಭ ಸೂರ್ಯ ನಮಸ್ಕಾರದಲ್ಲಿ ಗಿನ್ನಿಸ್ ದಾಖಲೆಗೈದ ನಿರಂಜನ ಶೆಟ್ಟಿ, ರೋಟರಿ ಬೈಂದೂರು ನಿಕಟಪೂರ್ವಾಧ್ಯಕ್ಷ ಮಂಜುನಾಥ ಶೆಟ್ಟಿ, ಲಯನ್ಸ್ ಬೈಂದೂರು ಉಪ್ಪುಂದದ ಅಧ್ಯಕ್ಷ ಕುಶಲ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಸಂಘದಿಂದ ಕೊಡಮಾಡುವ ಬೆಲ್ತೂರು ನಾಗಯ್ಯ ಶೆಟ್ಟಿ ಶಿಕ್ಷಕ ಪ್ರಶಸ್ತಿಯನ್ನು ನೂಜಾಡಿ ಶಾಲೆಯ ಮುಖ್ಯ ಶಿಕ್ಷಕಿ ಶೈಲಜಾ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಘದ ಕಾರ್ಯದರ್ಶಿ ನೆಲ್ಯಾಡಿ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿವೇತನ ಸಮಿತಿ ಸಂಚಾಲಕ ಗೋಪಾಲ ಶೆಟ್ಟಿ ಪ್ರಸ್ತಾವನೆಗೈದರು. ಸಹಕಾರ್ಯದರ್ಶಿ ಜಯರಾಮ ಶೆಟ್ಟಿ ವಂದಿಸಿದರು. ಸದಾಶಿವ ಶೆಟ್ಟಿ, ರಾಜೀವ ಶೆಟ್ಟಿ, ಚಿತ್ತೂರು ಚಂದ್ರಶೇಖರ ಶೆಟ್ಟಿ, ರವಿರಾಜ ಶೆಟ್ಟಿ, ವಿನೋದ್ ಶೆಟ್ಟಿ, ಸಂತೋಷ ಶೆಟ್ಟಿ, ಪ್ರದೀಪ್ ಶೆಟ್ಟಿ ಸಹಕರಿಸಿದರು. ಜೊತೆಕಾರ್ಯದರ್ಶಿ ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

twelve + 14 =