ಬೈಂದೂರು ಬಂಟರ ಸಂಘ: ದಿ. ಮಧುಕರ ಶೆಟ್ಟಿ ಸ್ಮರಣೆ, ರೋಗಿಗಳಿಗೆ ನೆರವು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಂಟರ ಯಾನೆ ನಾಡವರ ಸಂಘದ ಆಶ್ರಯದಲ್ಲಿ ದಕ್ಷ ಪ್ರಾಮಾಣಿಕ ಐಪಿಎಸ್ ಅಧಿಕಾರಿ ದಿವಂಗತ ಮಧುಕರ ಶೆಟ್ಟಿಯವರಿಗೆ ನುಡಿನಮನ ಹಾಗೂ ರೋಗಿಗಳಿಗೆ ನೆರವು ಕಾರ್ಯಕ್ರಮ ಸಂಘದ ಅಧ್ಯಕ್ಷ ಬಿ. ಜಗನ್ನಾಥ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಕ್ಲಾಡಿ ಪ್ರೌಡಶಾಲಾ ಮುಖ್ಯ ಶಿಕ್ಷಕ ಡಾ|| ಕಿಶೋರ ಕುಮಾರ್ ಶೆಟ್ಟಿ ದಿ. ಮಧುಕರ ಶೆಟ್ಟಿಯ ಜೀವನಾದರ್ಶನಗಳನ್ನು ಅಳವಡಿಸಿಕೊಳ್ಳುವಂತೆ ಯುವಕರಿಗೆ ಕg ನೀಡುತ್ತಾ ನುಡಿ ಗೌರವ ಸಲ್ಲಿಸಿದರು.

ಕುವೈಟ್ ಬಂಟರ ಸಂಘದ ವತಿಯಿಂದ ಮಧುಕರ ಶೆಟ್ಟಿ ಸಾಮಾಜಿಕ ಕಳಕಳಿ ಆದರ್ಶವಾಗಿರುವ ನಿಟ್ಟಿನಲ್ಲಿ ಉನ್ನತ ವಿದ್ಯಾಬ್ಯಾಸ ಪಡೆಯುತ್ತಿರುವ ಬಡಕುಟುಂಬದ ವಿದಾರ್ಥಿಗಳಿಗೆ ಹಾಗೂ ನೆರವು ಬಯಸಿ ಬಂದ ರೋಗಿಗಳಿಗೆ ರೂ.೭೫,೦೦೦ ಮೊತ್ತದ ಧನ ಸಹಾಯವನ್ನು ಕುವೈಟ್ ಬಂಟರ ಸಂಘದ ಅಧ್ಯಕ್ಷ ಪ್ರೊಪೆಸರ್ ಶೇಖರ ಶೆಟ್ಟಿ ತಂತ್ರಾಡಿ ವಿತರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ನಾರಾಯಣ ಶೆಟ್ಟಿ ಚುಚ್ಚಿ, ಜಗನ್ನಾಥ ಶೆಟ್ಟಿ ನಾಕಟ್ಟೆ, ಕೆ. ವಿಠ್ಠಲ ಶೆಟ್ಟಿ ಎಚ್. ವಸಂತ ಹೆಗ್ಡೆ ಉದ್ಯಮಿ ಗೋಕಲ್ ಶೆಟ್ಟಿ ಉಪ್ಪುಂದ, ನಾವುಂದ ಉಪ ಸಂಘದ ಅಧ್ಯಕ್ಷ ಜಗದೀಶ್ ಶೆಟ್ಟಿ ಕುದ್ರಕೋಡು, ಶಿರೂರು ಬಂಟರ ಸಂಘದ ಅಧ್ಯಕ್ಷ ಸತೀಶ್ ಕುಮಾರ ಶೆಟ್ಟಿ, ಯುವ ವೇದಿಕೆಯ ಅಧ್ಯಕ್ಷ ಸುಧಾಕರ ಶೆಟ್ಟಿ ನೆಲ್ಯಾಡಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಶಿಲ್ಪಾ ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಕರುಣಾಕರ ಶೆಟ್ಟಿ ನೆಲ್ಯಾಡಿ ಸ್ವಾಗತಿಸಿದರು. ಎಚ್. ವಸಂತ ಹೆಗ್ಡೆ ಪ್ರಸ್ತಾವನೆಗೈದರು. ಖಜಾಂಚಿ ಸದಾಶಿವ ಶೆಟ್ಟಿ, ಫಲಾನುಭವಿ ಚೆಕ್ ವಿತರಿಸಿದರು. ದಿವಾಕರ ಶೆಟ್ಟಿ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಜಯರಾಮ ಶೆಟ್ಟಿ ಬಿಜೂರು ವಂದಿಸಿದರು. ಕಾರ್ಯದರ್ಶಿ ಶಶಿಧರ ಶೆಟ್ಟಿ ಸಾಲ್ಗದ್ದೆ, ಯುವ ವೇದಿಕೆ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಕಾರಿಕಟ್ಟೆ, ನಿತಿನ್ ಶೆಟ್ಟಿ ಬೈಂದೂರು, ಗುರುರಾಜ್ ಶೆಟ್ಟಿ, ಶರತ್ ಶೆಟ್ಟಿ ಉಪ್ಪುಂದ ಸಹಕರಿಸಿದರು.

Leave a Reply

Your email address will not be published. Required fields are marked *

1 × five =