ಬೈಂದೂರು ಬಿಜೆಪಿ ಮಂಡಲ ಕಛೇರಿಯಲ್ಲಿ ಬೃಹತ್ ಖಾದಿ ಮೇಳ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ಕಛೇರಿಯಲ್ಲಿ ಎರಡು ದಿನಗಳ ಬೃಹತ್ ಖಾದಿ ಮೇಳವನ್ನು ಶಾಸಕರಾದ ಬಿ.ಎಂ. ಸುಕುಮಾರ್ ಶೆಟ್ಟಿ ಉದ್ಘಾಟನೆ ಮಾಡಿದರು.

Call us

Call us

ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಬೈಂದೂರು ಮಂಡಲದಲ್ಲಿ ನಡೆಯುತ್ತಿರುವ ಸೇವಾ ಮತ್ತು ಸಮರ್ಪಣಾ ಅಭಿಯಾನದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಪ್ರಾಮಾಣಿಕವಾಗಿ ದುಡಿಯುತ್ತಿರುವಂತಹ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

Call us

Call us

ಜಿಲ್ಲಾ ಉಪಾಧ್ಯಕ್ಷರು ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ ಮಾತನಾಡಿ, ಗಾಂಧಿಜೀಯವರ ಜೀವನ ಚರಿತ್ರೆ ಮತ್ತು ಸ್ವತಂತ್ರ ಸಂಗ್ರಾಮದಲ್ಲಿ ಅವರ ಪಾತ್ರವನ್ನು ವಿವರಿಸಿದರು.

ಈ ಸಂದರ್ಭ ಸುರೇಶ್ ಬಟ್ವಾಡಿ, ಬಾಬು ಹೆಗ್ಡೆ, ಮಹೇಂದ್ರ ಪೂಜಾರಿ, ಪ್ರಜ್ವಲ್ ಶೆಟ್ಟಿ, ಸದಾಶಿವ ಪಡುವರಿ, ಮಾಲಿನಿ ಕೆ., ಶರತ್ ಕುಮಾರ್ ಶೆಟ್ಟಿ, ಭಾಗೀರಥಿ ಸುರೇಶ್, ಸಂತೋಷ್ ಮಡಿವಾಳ, ಹಾಗೂ ಪಕ್ಷದ ಪದಾದಿಕಾರಿಗಳು , ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮಂಡಲ ಪ್ರಧಾನ ಕಾರ್ಯದರ್ಶಿಯಾದ ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಆನಂದ ಖಾರ್ವಿ ಉಪ್ಪುಂದ ಧನ್ಯವಾದ ಸಮರ್ಪಸಿದರು.

Leave a Reply

Your email address will not be published. Required fields are marked *

7 + 19 =