ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಾಗೂರಿನಲ್ಲಿ ನಡೆಯಿತು.

ರಕ್ತದಾನ ಶಿಬಿರಕ್ಕೆ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಅವರು ಚಾಲನೆ ನೀಡಿದರು. ಕಾರ್ಯಕರ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸುವುದರ ಮೂಲಕ ಗೋಪಾಲ ಪೂಜಾರಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್, ಮುಖಂಡರುಗಳಾದ ರಘುರಾಮ ಶೆಟ್ಟಿ, ವಿಜಯ್ ಶೆಟ್ಟಿ, ರಮೇಶ ಗಾಣಿಗ, ಗೌರಿ ದೇವಾಡಿಗ, ನಾಗರಾಜ ಗಾಣಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಅರವಿಂದ ಪೂಜಾರಿ, ಜಗದೀಶ ಕೊಡೇರಿ, ಪ್ರಕಾಶ್, ತಭ್ರೆಜ್ ನಾಗೂರು, ಗಣೇಶ್ ಪೂಜಾರಿ, ಈಶ್ವರ ದೇವಾಡಿಗ, ಸಿ.ಎಸ್ ಖಾರ್ವಿ, ನರಸಿಂಹ ಹಳಗೇರಿ, ರಾಜೇಶ್ ಕಂಬದಕೋಣೆ, ಬ್ಲಡ್ ಹೆಲ್ಪ್ ಕೇರ್ ನ ಫಾಯಾಜ್ ಬೈಂದೂರು, ರೆಡ್ ಕ್ರಾಸ್ನ ವಿರೇಂದ್ರ, ಡಾ. ದೀಕ್ಷಾ ಸೇರಿದಂತೆ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
