ಬೈಂದೂರು: ಭಿಕ್ಷಾಟನೆ ಮಾಡುತ್ತಿದ್ದ ಮಕ್ಕಳ ರಕ್ಷಣೆ, ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.

Call us

Call us

ಬೈಂದೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಚಿಕ್ಕ ಬಾಲಕಿಯರನ್ನು ರಕ್ಷಿಸಿ ಉಡುಪಿ ನಿಟ್ಟೂರಿನ ಮಕ್ಕಳ ಕಲ್ಯಾಣ ಸಮಿತಿ
ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿಲಾಗಿದೆ.

ಬೈಂದೂರು ಠಾಣಾಧಿಕಾರಿ ಸಂತೋಷ್ ಆನಂದ್ ಕಾಯ್ಕಿಣಿ ಬೆಳಿಗ್ಗೆ ಬಸ್ ನಿಲ್ದಾಣದಲ್ಲಿ ರೌಂಡ್ಸ್‌ನಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿಯ ಮಂಜುಳಾ
ಎಂಬ ಮಹಿಳೆ 2 ಮಕ್ಕಳ ಜತೆಗೆ ಸಾರ್ವಜನಿಕರಿಂದ ಭಿಕ್ಷಾಟನೆ ಮಾಡುತ್ತಿರುವುದನ್ನು ಗಮನಿಸಿ ಅವರ ಹಿನ್ನೆಲೆಯನ್ನು ವಿಚಾರಿಸಿದ್ದಾರೆ.

Call us

Call us

ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಆಕೆ ತನ್ನ ಗಂಡ ಶಂಕರ ಮರಣಹೊಂದಿ ಮೂರು ವರ್ಷವಾಗಿದ್ದು, ಮಕ್ಕಳು ಯಾರೆಂದು ಸರಿಯಾಗಿ ತಿಳಿಸದೇ
ವ್ಯತಿರಿಕ್ತ ಹೇಳಿಕೆಯಿಂದ ಅನುಮಾನಗೊಂಡ ಠಾಣಾಧಿಕಾರಿ, ಮಹಿಳೆ ಮತ್ತು ಮಕ್ಕಳನ್ನು ಠಾಣೆಗೆ ಕರೆತಂದು ಭಿಕ್ಷಾಟನೆ ಮಾಡದಂತೆ ಎಚ್ಚರಿಕೆ
ನೀಡಿದ್ದಲ್ಲದೇ ಮಹಿಳೆಯೊಂದಿಗೆ ಮಕ್ಕಳನ್ನು ಕಳುಹಿಸಿದರೆ ಪುನಃ ಭಿಕ್ಷಾಟನೆ ಮಾಡುವ ಸಾಧ್ಯತೆಯಿದೆ ಎಂಬ ನೆಲೆಯಲ್ಲಿ ನಿಟ್ಟೂರಿನ ಮಕ್ಕಳ ಕಲ್ಯಾಣ
ಸಮಿತಿ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳ ವಶಕ್ಕೆ ನೀಡಿದ್ದು, ದಾಖಲೆಗಳೊಂದಿಗೆ ತಂದೆ ತಾಯಿಯರು ಬಂದರೆ ಮಕ್ಕಳನ್ನು
ಮರಳಿಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ten − 2 =