ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಸೇವಾ ಸಂಗಮ ಶಿಶುಮಂದಿರದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಬೈಂದೂರು ಮತ್ತು ಸೇವಾ ಸಂಗಮ ಶಿಶುಮಂದಿರದ ಮಾತೃ ಮಂಡಳಿಯ ಸಹಯೋಗದಲ್ಲಿ ಇನ್ನರ್ ವ್ಹಿಲ್ ಕ್ಲಬ್ನ ಹಿರಿಯ ಸದಸ್ಯರಾದ ಸೀತಾ ಶ್ರೀನಿವಾಸ್ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನಗೊಂಡ ಸೀತಾ ಶ್ರೀನಿವಾಸ್ ಮಾತನಾಡಿ ಮಹಿಳೆಯರಿಗೆ ವಿದ್ಯಾಭ್ಯಾಸದ ಅಗತ್ಯತೆಯ ಬಗ್ಗೆ ತಿಳಿಸಿದರು. ಇನ್ನರ್ ವ್ಹಿಲ್ ಕ್ಲಬ್ನ ಅಧ್ಯಕ್ಷೆ ನಾಗರತ್ನ ಮಂಜುನಾಥ್ ಶೆಟ್ಟಿ ಸ್ವಾಗತಿಸಿ, ಮಹಿಳೆಯರಿಗೆ ಪ್ರಶಕ್ತ ಸಮಾಜದಲ್ಲಿ ತಮ್ಮ ಹಕ್ಕು ಭಾದ್ಯತೆಗಳನ್ನು ಪಡೆದುಕೊಳ್ಳುವ ಬಗ್ಗೆ ಜಾಗ್ರತೆ ಮೂಡಿಸಿದರು. ಸ್ಥಾಪಕಾಧ್ಯಕ್ಷೆ ಚಂದ್ರಕಲಾ ಶೆಟ್ಟಿಯವರು ನಮ್ಮ ಸಂಸ್ಕ್ರತಿ, ಸಂಸ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಸೇವಾಸಂಗಮದ ಮಾತಾಜೀ ಸುಮನ, ಆಶಾ ಮತು ಭಾನುಮತಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಲತಿಕಾ ನಂಬಿಯಾರ್ರವರು ಕಾರ್ಯಕ್ರಮ ನಿರೂಪಿಸಿದರು. . I. S. O. ಉಷಾ ಹೆಗ್ಡೆಯವರು ಧನ್ಯವಾದ ಸಮರ್ಪಣೆ ಮಾಡಿದರು.