ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿದ್ ನಂತಹ ಸಾಂಕ್ರಾಮಿಕ ರೋಗ ಹರಡಿ ಸಹಸ್ರ ಸಮಸ್ಯೆಗಳ ಸೃಷ್ಟಿಸುತ್ತಿರುವ ನಡುವಿನಲ್ಲಿ ಸರ್ವರಿಗೂ ಸಹಾಯ ಹಸ್ತ ಚಾಚುವ ಸಂಘಟನೆಗಳು ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತವೆ ಆ ನೆಲೆಯಲ್ಲಿ ‘ನೊಂದ ಜೀವಕ್ಕೊಂದು ಆಸರೆ’ ಎನ್ನುವ ಸಂಕಲ್ಪದೊಂದಿಗೆ ಸ್ಥಾಪಿಸುತ್ತಿರುವ ಸಂಘಟನೆ ನೂರುಕಾಲ ಸೇವೆಯಲ್ಲಿ ತೊಡಗಲಿ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳೇ ತುಂಬಿರುವ ಈ ಸಂಘಟನೆ ಮುಂದಿನ ದಿನದಲ್ಲಿ ಕಾಲೇಜಿನ ಸರ್ವತೋಮುಖ ಅಭಿವೃದ್ದಿಗೆ ಸಹಾಯಹಸ್ತ ಚಾಚುವಂಥ ಆಗಲಿ ಎಂದು ಬೈಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ರಘು ನಾಯ್ಕ ಹೇಳಿದರು.
ಅವರು, ಕಾಲೇಜಿನ 2013-14 ವರ್ಷದ ಬಿಬಿಎಂ ವಿದ್ಯಾರ್ಥಿಗಳು ಸಂಘಟಿಸಿದ ಬೈಂದೂರು ತಾಲೂಕು ಮಿತ್ರ ಸೇವಾಶ್ರಯ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವ್ಯವಹಾರ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿನೋದ್ ನೀಲಪ್ಪ ಬಸುಪಟ್ಟದ ಸಂಘಟನೆಯ ಲೋಗೋವನ್ನು ಬಿಡುಗಡೆಗೊಳಿಸಿ ಭಾಷಣಗೈದರು.
ಸಂಘದ ಅಧ್ಯಕ್ಷರಾದ ಹರೀಶ್ ಅಧ್ಯಕ್ಷತೆ ವಹಿಸಿದ್ದರು ಹಾಗೂ ಉಪಾಧ್ಯಕ್ಷರಾದ ಸುಧಾಕರ್ ರವರು ಸ್ವಾಗತಿಸಿದರು. ಭಾಸ್ಕರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.