ಬೈಂದೂರು: ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿ ಸಮುದ್ರಕ್ಕೆ ಬಿದ್ದು ಸಾವು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರಿಕೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಪಡುವರಿ ಗ್ರಾ.ಪಂ ವ್ಯಾಪ್ತಿಯ ಸೋಮೇಶ್ವರ ಕಡಲ ಕಿನಾರೆಯ ಬಳಿ ವರದಿಯಾಗಿದೆ. ಶಾಂತಾರಾಮ ಪೂಜಾರಿ (37) ಮೃತ ದುರ್ದೈವಿ.

Call us

Call us

Visit Now

ಶಿರೂರು ಕರಾವಳಿ ಬೆಲೆಮನೆ ನಿವಾಸಿ ಶಾಂತಾರಾಮ ಪೂಜಾರಿ ಸಂಜೆಯ ವೇಳೆಗೆ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದಾಗ, ದೋಣಿಯಲ್ಲಿದ್ದ ಆಯತಪ್ಪಿ ನೀರಿಗೆ ಬಿದ್ದಿದ್ದರು. ಸಮುದ್ರ ಉಬ್ಬರವಿದ್ದುದರಿಂದ ನೀರಿನ ಸೆಳವಿಗೆ ಸಿಕ್ಕಿದ್ದ ಅವರು ಈಜಿ ದಡದತ್ತ ಸೇರುವ ಪ್ರಯತ್ನವೂ ವಿಫಲವಾಗಿ ಉಸಿರು ಬಿಗಿಹಿಡಿದಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೇರೊಂದು ದೋಣಿಯ ಮೂಲಕ ದಡಕ್ಕೆ ತಂದು ಪೊಲೀಸ್ ಜೀಪ್‌ನಲ್ಲಿಯೇ ತುರ್ತಾಗಿ ಬೈಂದೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಶಾಂತಾರಾಮ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Call us

Call us

ಸ್ಥಳೀಯರು, ಪೊಲೀಸರು ಸಮಯ ಪ್ರಜ್ಞೆ ಮೆರೆದರೂ ಜೀವ ಉಳಿಯಲಿಲ್ಲ:
ಸಮುದ್ರ ತೀರದಿಂದ ಅನತಿ ದೂರದಲ್ಲಿ ಶಾಂತಾರಾಮ್ ನೀರಿಗೆ ಬಿದ್ದಿದ್ದರು. ಅವರು ಅಪಾದಲ್ಲಿರುವುದು ಗಮನಕ್ಕೆ ಬರುತ್ತಿದ್ದಂತೆ ತೀರದಲ್ಲಿದ್ದ ಸ್ಥಳೀಯರು ಕೂಗಿಕೊಂಡು ರಕ್ಷಣೆಗೆ ಧಾವಿಸಿದ್ದರು. ತೀರಕ್ಕೆ ಕರೆತಂದವರೇ ಅವರ ಹೊಟ್ಟೆಯನ್ನು ಅಮುಕಿ ನೀರನ್ನು ಹೊರಹಾಕಿ ಮಾಡಿ ಅಂಬುಲೆನ್ಸ್ ಬಾರದೇ ಇದ್ದುದರಿಂದ ಕೂಡಲೇ ಪೊಲೀಸ್ ಜೀಪಿನಲ್ಲಿಯೇ ಶರವೇಗದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆ ತಲುಪುವುದರೊಳಗೆ ಅವರ ಪ್ರಾಣಪಕ್ಷಿ ಹಾರಿಹೊಗಿತ್ತು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

 Fisher person died at Someshwara beach byndoor (3) Fisher person died at Someshwara beach byndoor (4) Fisher person died at Someshwara beach byndoor (2)

Leave a Reply

Your email address will not be published. Required fields are marked *

18 − 16 =