ಬೈಂದೂರು: ಮೇಲ್ಸೆತುವೆ ಆಗ್ರಹಿಸಿ ಬೃಹತ್ ಪ್ರತಿಭಟನೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯಡ್ತರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಂದೂರು ವೃತ್ತದ (ಬೈಪಾಸ್) ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲ್ ಸೇತುವೆ ನಿರ್ಮಿಸಬೇಕೆಂಬ ಆಗ್ರಹಿಸಿ ಬೈಂದೂರು ವಲಯ ರಾಷ್ಟ್ರೀಯ ಹೆದ್ದಾರಿ 66 ನಿರ್ಮಾಣ ಜಾಗೃತ ಸಮಿತಿ ನೇತೃತ್ವದಲ್ಲಿ ಬೈಪಾಸ್ ಬಳಿ ಬೃಹತ್ ಪ್ರತಿಭಟನೆ ಜರುಗಿತು.

Call us

Call us

Call us

ಬೈಂದೂರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದ್ದು, ಪಾದಾಚಾರಿಗಳಿಗೆ, ಬೈಂದೂರು ನಗರ-ಬಂಕೇಶ್ವರ ರಸ್ತೆಯಲ್ಲಿ ಸಂಚರಿಸುವವರಿಗೆ ಒಳಸುರಂಗ (ಪಿಯುಪಿ) ನಿರ್ಮಿಸುವ ಕುರಿತು ನೀಲನಕ್ಷೆಯ ತಯಾರಾಗಿದೆ. ಆದರೆ ತಾಲೂಕು ಕೇಂದ್ರವಾಗಲಿರುವ ಬೈಂದೂರಿನ ಅಭಿವೃದ್ಧಿಗೆ ಇದರಿಂದ ಈ ನಿರ್ಧಾರದಿಂದ ತೊಂದರೆಯಾಗಲಿದೆ. ಈ ಕುರಿತು ಕಳೆದ ೨-೩ ವರ್ಷಗಳಿಂದ ಸಂಬಂಧಪಟ್ಟವರಿಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ರೀತಿಯ ಸಕರಾತ್ಮಕ ಪ್ರತಿಸ್ಪಂದನ ದೊರೆತಿಲ್ಲ. ಬಹುಜನರ ಬೇಡಿಕೆಗೆ ಸ್ಪಂದಿಸದ ಇಲಾಖೆಯ ಧೋರಣೆಯನ್ನು ಖಂಡಿಸುವುದಾಗಿ ಪ್ರತಿಭನಾಕಾರರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು. ಬೈಂದೂರು ತಹಶೀಲ್ದಾರರ ಮೂಲಕ ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾಕಾರರು ಕೆಲಹೊತ್ತು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬೈಂದೂರು ಪೊಲೀಸರು ಪ್ರತಿಭಟನಾ ನಿರತ ಮುಖಂಡರನ್ನು ಬಂಧಿಸಿ ಸ್ವಲ್ಪ ಹೊತ್ತಿನ ಬಳಿಕ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಬಾಬು ಶೆಟ್ಟಿ, ಸುರೇಶ್ ಬಟವಾಡಿ, ಶಂಕರ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ತಾಪಂ ಸದಸ್ಯ ಪುಪ್ಪರಾಜ್ ಶೆಟ್ಟಿ, ಪ್ರಮುಖರಾದ ಬಿ.ಎಂ ಸುಕುಮಾರ್ ಶೆಟ್ಟಿ, ದೀಪಕ್‌ಕುಮಾರ್ ಶೆಟ್ಟಿ, ಸದಾಶಿವ ಡಿ. ಪಡುವರಿ, ಜಯಾನಂದ ಹೋಬಳಿದಾರ್, ನಾಗರಾಜ್ ಗಾಣಿಗ, ಡಾ. ಸುಬ್ರಹ್ಮಣ್ಯ ಭಟ್, ವೆಂಕಟೇಶ್ ಕೋಣಿ, ಸತೀಶ್ ಕೆ.ವಿ ನಿತೀನ್ ಶೆಟ್ಟಿ ಸೇರಿದಂತೆ ಬೈಂದೂರಿನ ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

eight − two =