ಬೈಂದೂರು ರೆಡ್‌ಕ್ರಾಸ್ ಘಟಕದಿಂದ ಗೃಹೋಪಯೋಗಿ ವಸ್ತು ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಭಾರತೀಯ ರೆಡ್‌ಕ್ರಾಸ್ ಬೈಂದೂರು ಘಟಕದ ಆಶ್ರಯದಲ್ಲಿ ಉಪ್ಪುಂದ ಗ್ರಾಮದ ಹಾಡಿಮನೆ ಗೋವಿಂದು ದೇವಾಡಿಗ ಮನೆಯವರಿಗೆ ಗೃಹ ಉಪಯೋಗಿ ವಸ್ತುಗಳಾದ ಟಾರ್‌ಪಲ್ ಹಾಗೂ ಇತರ ವಸ್ತುಗಳನ್ನು ವಿತರಿಸಲಾಯಿತು.

ಹಾಗೆಯೇ ಗ್ರಾಮ ಪಂಚಾಯತಿಗೆ ಆಕ್ಸಿಮೀಟರ್, ಮಾಸ್ಕ್ ವಿತರಿಸಲಾಯಿತು, ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ಕೊಡುಗೆಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬೈಂದೂರು ರೆಡ್‌ಕ್ರಾಸ್‌ನ ಸಭಾಪತಿ ನಿತಿನ್ ಬಿ. ಶೆಟ್ಟಿ, ಕಾರ್ಯದರ್ಶಿ ಮನೋಹರ ಶೆಟ್ಟಿ, ಖಜಾಂಚಿ ಸಂತೋಷ ಶೆಟ್ಟಿ , ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ ಶೆಟ್ಟಿ ಸದಸ್ಯರಾದ ಮಂಜುನಾಥ ದೇವಾಡಿಗ, ನಾಗರಾಜ ಶೇಟ್ ರೆಡ್‌ಕ್ರಾಸ್ ಸದಸ್ಯರಾದ ಯೂ. ಸಂದೇಶ ಭಟ್ , ಅನಿಲ್.ಡಿ. ಉಪ್ಪುಂದ, ರಮೇಶ ಜೋಗಿ ಹಳಗೇರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

7 + 19 =