ಬೈಂದೂರು ರೋಟರಿ ಕ್ಲಬ್: ಸತೀಶ್ ಬಿ.ಎಸ್, ಗೀತಾ ಬೈಂದೂರುಗೆ ಸನ್ಮಾನ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಇಲ್ಲಿನ ರೋಟರಿ ಕ್ಲಬ್ ವತಿಯಿಂದ ತಿಂಗಳ ಕುಟುಂಬ ಸಮ್ಮಿಲನ ಹಾಗೂ ರಾಷ್ಟ್ರಪತಿಯಿಂದ ಪೊಲೀಸ್ ಸೇವಾ ಪದಕ ವಿಜೇತ ಉಡುಪಿಯ ಎ.ಸಿ.ಬಿ ಅಧಿಕಾರಿ ಸತೀಶ್ ಬಿ.ಎಸ್ ಹಾಗೂ ಇತ್ತೀಚಿಗಷ್ಟೆ ಹಾಡು ಕರ್ನಾಟಕದಲ್ಲಿ ಭಾಗವಹಿಸಿದ ಗೀತಾ ಬೈಂದೂರು ಇವರಿಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಸಂಜೆ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.

Call us

Call us

Visit Now

ರೋಟರಿ ಕ್ಲಬ್‍ನ ಅಧ್ಯಕ್ಷ ರೋ. ಯು ಪ್ರಕಾಶ್ ಭಟ್ ರೋಟರಿ ತಿಂಗಳ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

Click here

Call us

Call us

ರಾಷ್ಟ್ರಪತಿಯಿಂದ ಪೊಲೀಸ್ ಸೇವಾ ಪದಕ ವಿಜೇತ ಉಡುಪಿಯ ಎ.ಸಿ.ಬಿ ಅಧಿಕಾರಿ ಸತೀಶ್ ಬಿ.ಎಸ್ ಇವರಿಗೆ ಬೈಂದೂರು ರೋಟರಿ ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.

ಪೊಲೀಸ್ ಸೇವಾ ಪದಕ ವಿಜೇತ ಉಡುಪಿಯ ಎ.ಸಿ.ಬಿ ಅಧಿಕಾರಿ ಸತೀಶ್ ಬಿ.ಎಸ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಾಧನೆ ಮಾಡಲು ನಮ್ಮಲ್ಲಿ ಶ್ರದ್ಧೆ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಪ್ರಯತ್ನ ಇದ್ದು ಇದ್ದರೆ ಯಾರು ಏನನ್ನೂ ಬೇಕಾದರು ಮಾಡಬಹುದು. ಸಾಧನೆ ಮಾಡಲು ಸಾಕಷ್ಟು ಮಾರ್ಗಗಳಿವೆ. ನಾವು ನಮ್ಮ ಮಕ್ಕಳಿಗೆ ಸರಿಯಾದ ಸಂಸ್ಕಾರಯುತ ಶಿಕ್ಷಣವನ್ನು ನೀಡಿದರೆ ಮುಂದೆ ಒಂದು ದಿನ ಐ.ಪಿ.ಎಸ್ ಅಧಿಕಾರಿಯಾಗಲು ಅವಕಾಶ ದೊರೆಯುತ್ತದೆ. ನನ್ನನ್ನು ಗುರುತಿಸಿದ ಬೈಂದೂರು ರೋಟರಿ ಸಂಸ್ಥೆಗೆ ಯಾವತ್ತೂ ಚಿರಋಣಿಯಾಗಿರುತ್ತೇನೆ ಎಂದರು.

ಈ ಸಂದರ್ಭದಲ್ಲಿ ಇತ್ತೀಗಷ್ಟೇ ಕಲರ್ರ್ಸ್ ಕನ್ನಡ ವಾಹಿನಿಯಲ್ಲಿ ಹಾಡು ಕರ್ನಾಟಕ ರಿಯಾಲಿಟಿ ಸ್ಪರ್ಧೆಯಲ್ಲಿ ಭಾಗವಹಿಸಿದ ಗೀತಾ ಬೈಂದೂರು ಇವರಿಗೆ ಬೈಂದೂರು ರೋಟರಿ ಕ್ಲಬ್ ವತಿಯಿಂದ ಗುರುತಿಸಿ, ಸನ್ಮಾನಿಸಲಾಯಿತು.

ಬೈಂದೂರು ರೋಟರಿ ಕ್ಲಬ್ ನ ಸ್ಥಾಪಕಾಧ್ಯಕ್ಷ ನಿವೃತ್ತ ಐ.ಎಫ್.ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ, ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ ವಸಂತ ಶೆಟ್ಟಿ, ಬೈಂದೂರು ಇನ್ನರ ವೀಲ್ ಕ್ಲಬ್ ನ ಉಪಾಧ್ಯಕ್ಷೆ ಆಶಾಕಿಶೋರ್ ಉಪಸ್ಥಿತರಿದ್ದರು.

ರೋಟರಿ ಕ್ಲಬ್‍ನ ಅಧ್ಯಕ್ಷ ರೋ. ಯು ಪ್ರಕಾಶ್ ಭಟ್ ಸ್ಥಾಗತಿಸಿದರು, ರೋಟರಿ ಸದಸ್ಯ ಪ್ರಸಾದ ಪ್ರಭು ಶಿರೂರು ಉಡುಪಿಯ ಎ.ಸಿ.ಬಿ ಅಧಿಕಾರಿ ಸತೀಶ್ ಬಿ.ಎಸ್ ಅವರ ಪರಿಚಯ ವಾಚಿಸಿದರು, ಗೀತಾ ಬೈಂದೂರು ಇವರ ಪರಿಚಯವನ್ನು ಜಾಹ್ನಿ ಪ್ರಸಾದ್ ಪ್ರಭು ವಾಚಿಸಿದರು. ಬೈಂದೂರು ರೋಟರಿ ಕ್ಲಬ್ ನ ಕಾರ್ಯದರ್ಶಿ ಮಂಜುನಾಥ ಮಹಾಲೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *

18 − 12 =