ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಸಂಘದ ವಾರ್ಷಿಕ ಮಹಾಸಭೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋವಿಡ್ ಮಹಾಮಾರಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಜಿಲ್ಲೆಯ ಸಂಘಟನೆಯ ಎಲ್ಲಾ ಮಾಲಕರು ಹಾಗೂ ಕಾರ್ಮಿಕರು ಉದ್ಯೋಗವಿಲ್ಲದೇ ಇವರ ಆಶ್ರಿತ ಕುಟುಂಬಗಳು ವಿವಿಧ ರೀತಿಯ ಕಷ್ಟ-ನಷ್ಟಗಳಿಗೆ ಸಿಲುಕಿದ್ದು, ನಮ್ಮ ನೆರವಿಗೆ ಯಾರೂ ಬಾರದ ಹಿನ್ನೆಲೆಯಲ್ಲಿ ನಮಗೆ ನಾವೇ ಸಾಂತ್ವಾನ ಹೇಳಿಕೊಂಡು ಮುಂದೆ ಸಾಗಬೇಕಿದೆ ಎಂದು ಧ್ವನಿ ಬೆಳಕು ಸಂಯೋಜಕರ ಸಂಘಟನೆಯ ಜಿಲ್ಲಾಧ್ಯಕ್ಷ ಕಾಪು ಶಿವರಾಜ್ ಮಲ್ಲಾರ್ ಹೇಳಿದರು.

Call us

Call us

Call us

ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆದ ಬೈಂದೂರು ವಲಯ ಧ್ವನಿ-ಬೆಳಕು ಸಂಯೋಜಕರ ಹತ್ತನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ನಮ್ಮ ವೃತ್ತಿ ಬಾಂಧವರು (ಸೌಂಡ್ ಪಾರ್ಟಿ) ಲಕ್ಷಾಧೀಶ್ವರರು. ಇವರಿಗೆ ಹಣದ ಅವಶ್ಯಕತೆ ಇರುವುದಿಲ್ಲ ಎಂಬ ತಪ್ಪು ಭಾವನೆಯಿಂದ ಕೊರೊನಾ ಸಂಕಷ್ಟದಲ್ಲಿ ಸರ್ಕಾರ, ಜನಪ್ರತಿನಿಧಿಗಳು ನಮ್ಮ ಹತ್ತಿರ ಸುಳಿಯಲಿಲ್ಲ. ಆದರೆ ನಾವು ಲಕ್ಷಗಟ್ಟಲೆ ಸಾಲ ಮಾಡಿ ಉದ್ಯಮದಲ್ಲಿ ತೊಡಗಿಸಿ ನಷ್ಟದ ದಾರಿಯಲ್ಲಿ ಸಾಗುತ್ತಿರುವ ಸತ್ಯ ಇವರ‍್ಯಾರಿಗೂ ತಿಳಿಯದಿರುವುದು ಮಾತ್ರ ದುರಂತ. ಪ್ರತಿಯೊಂದು ಸಭೆ-ಸಮಾರಂಭಗಳಿಗೆ ನಾವು ಬೇಕು, ಆದರೆ ಕಷ್ಟದ ದಿನಗಳಲ್ಲಿ ಮಾತ್ರ ನಾವು ಯಾರಿಗೂ ಬೇಡ ಎನ್ನುವಂತಾಗಿದೆ ನಮ್ಮ ಸ್ಥಿತಿ ಎಂದರು.

Call us

Call us

ಸಂಘದ ಅಧ್ಯಕ್ಷ ಎನ್. ಶಶಿಧರ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಕೊವಿಡ್‌ನಿಂದ ಮೃತಪಟ್ಟ ಸಂಘದ ಸದಸ್ಯ ಪ್ರಸನ್ನ ಹೊಳ್ಳ ಇವರ ಪತ್ನಿ ಅಕ್ಷತಾ ಹೊಳ್ಳ ಇವರಿಗೆ ಸಾಂತ್ವಾನದೊಂದಿಗೆ ಪರಿಹಾರದ ಚೆಕ್ ನೀಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾಮೋದರ್ ಕೆ., ಕೋಶಾಧಿಕಾರಿ ಸಂತೋಷ್ ಶೆಟ್ಟಿಗಾರ್, ಕುಂದಾಪುರ ವಲಯಾಧ್ಯಕ್ಷ ಸರ್ದಾರ್ ಕೋಟೇಶ್ವರ, ಬ್ರಹ್ಮಾವರ ವಲಯಾಧ್ಯಕ್ಷ ರಾಮಕೃಷ್ಣ ಕುಂದರ್, ಉಡುಪಿ ವಲಯಾಧ್ಯಕ್ಷ ರಾಧಾಕೃಷ್ಣ ಶೆಟ್ಟಿಗಾರ್, ಬೈಂದೂರು ವಲಯದ ಗೌರವಾಧ್ಯಕ್ಷ ಮಣಕನ ನಾರಾಯಣ, ಕಾರ್ಯದರ್ಶಿ ಯು. ವಿನಾಯಕ ಪ್ರಭು, ಕೋಶಾಧಿಕಾರಿ ರತ್ನಾಕರ ಪೂಜಾರಿ, ರಾಜ್ಯ ಸಂಘದ ನಿರ್ದೇಶಕ ಹಸನ್ ಉಪಸ್ಥಿತರಿದ್ದರು.

ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಪ್ರಾಸ್ತಾವಿಸಿದರು. ಇಚೆರ್ ಕಂಪೆನಿಯ ಮಹೇಶ್ ಕುಮಾರ್ ಹೊಸ ಮಾದರಿ ಜನರೇಟರ್‌ಗಳನ್ನು ಪರಿಚಯಿಸಿದರು. ಮಂಗಳೂರು ಬ್ಲೂಬರ್ಡ್ಸ್ ಡಿಸೇಲ್ ಇಂಜಿನಿಯರಿಂಗ್ ಮಹಾಸಭೆಯ ಪ್ರಾಯೋಜಕತ್ವವಹಿಸಿತ್ತು. ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹರೆಗೋಡು ಉದಯ್ ಆಚಾರ್ ನಿರೂಪಿಸಿದರು. ಹೇರಂಜಾಲು ಶೇಷು ದೇವಾಡಿಗ ವಂದಿಸಿದರು.

Leave a Reply

Your email address will not be published. Required fields are marked *

fourteen − six =