ಬೈಂದೂರು: ಅತಿಥಿ ಉಪನ್ಯಾಸಕರ ಪ್ರತಿಭಟನೆ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Call us

Call us

ಬೈಂದೂರು: ರಾಜ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಕೆಲಸ ಭದ್ರತೆ ನೀಡಬೇಕಿದ್ದ ಸರಕಾರ ಖಾಯಂ ಉಪನ್ಯಾಸಕರ ನೇಮಕಾತಿಯಲ್ಲಿ ತಾರತಮ್ಯ ನೀತಿ ತಳೆದು ನಮ್ಮನ್ನು ಬೀದಿ ತರುವ ಹುನ್ನಾರ ನಡೆಸಿದೆ ಎಂದು ಉಡುಪಿ ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧಕ್ಷ ರಂಜಿತ್‌ಕುಮಾರ್ ಶೆಟ್ಟಿ ವಕ್ವಾಡಿ ಆರೋಪಿಸಿದರು.

Call us

Call us

[quote font_size=”16″ bgcolor=”#ffffff” arrow=”yes” align=”right”]ಸ್ಥಳಕ್ಕಾಗಮಿಸಿದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವನ್ನು ನೇರವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸುತ್ತೇನೆ. ನಿಮ್ಮ ಹೋರಾಟಕ್ಕೆ ಧನಿಯಾಗಿ ನಿಲ್ಲುತ್ತೇನೆ. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆಯ ಬಳಿಕ ಮುಂದಿನ ನಿರ್ಣಯ ಕೈಗೊಳುವ ಬಗ್ಗೆ ಚಿಂತಿಸುವುದಾಗಿ ತಿಳಿಸಿದರು. ಸಮಾಜದ ಸತ್ಪ್ರಜೆಗಳನ್ನು ರೂಪಿಸುವ ನೀವುಗಳೇ ಚುನಾವಣೆ ಬಹಿಷ್ಕಾರದಂತಹ ನಿರ್ಣಯ ಕೈಗೊಳ್ಳುವುದು ಸರಿಯಲ್ಲ ಎಂದು ಪ್ರತಿಭಟನಾಕಾರ ಮನವೋಲಿಸಿದರು.[/quote]

Click here

Click Here

Call us

Call us

Visit Now

ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಜನವರಿ 12ರಿಂದ ನಿರಂತವಾಗಿ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಈವರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲೀ, ಶಿಕ್ಷಣ ಸಚಿವರಾಗಲಿ, ರಾಜ್ಯ ಸರಕಾರವಾಗಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಬೇಜವಬ್ದಾರಿಯುತವಾಗಿ ವರ್ತಿಸುತ್ತಿದೆ. ಕಳೆದ ನಾಲ್ಕು ತಿಂಗಳುಗಳಿಂದ ಸಂಬಳ ನೀಡಿದೆ ಸತಾಯಿಸುತ್ತಿದೆ ಎಂದ ಅವರು, ಇದು ಹೀಗೆ ಮುಂದುವರಿದರೆ ಚುನವಾಣೆ ಬಹಿಷ್ಕರಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದವರು ಎಚ್ಚರಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ರಾಜ್ಯದ ಶಿಕ್ಷಣ ಸಚಿವರು ಇನ್ನಾದರೂ ಮಧ್ಯ ಪ್ರವೇಶಿಸಿ ಶಾಸನ ಸಭೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಲು ತೊಡಕಾಗಿರುವ ಕಾನೂನಿಗೆ ತಿದ್ದುಪಡಿ ತಂದು ಅಥವಾ ಈಗಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವ ಹೊಸ ಕಾನೂನು ಜಾರಿಗೆ ತಂದು ಹಲವು ವರ್ಷಗಳಿಂದ ಜೀತದಾಳುಗಳಂತೆ ಸೇವೆ ಸಲ್ಲಿಸುತ್ತಾ ಬಂದಿರುವ ನಮಗೆ ಮಾನವೀಯ ನೆಲೆಯಲ್ಲಾದರೂ ಖಾಯಂಗೊಳಿಸಿ ನ್ಯಾಯ ಒದಗಿಸಲಿ ಎಂದವರು ಆಗ್ರಹಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕಾನೂನು ತೊಡಕನ್ನು ನಿವಾರಿಸಿ ಅತಿಥಿ ಉಪನ್ಯಾಸಕರನ್ನು ಖಾಯಂ ಗೊಳಿಸುವುದು, ಮಾಸಿಕ ವೇತನವನ್ನು ರೂ.25,00ಕ್ಕೆ ಹೆಚ್ಚಿಸುವುದು, ವರ್ಷದ 12ತಿಂಗಳು ವೇತನ ನೀಡುವುದು ಹಾಗೂ ಸೇವಾ ಹಿರಿತನ ಹಾಗೂ ವಯೋಮಿತಿಯ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ಕುಂದಾಪುರ ತಾಲೂಕು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಮಣಿಕಂಠ ದೇವಾಡಿಗ, ಕಾರ್ಯದರ್ಶಿ ಪಾಂಡುರಂಗ ಹಾಗೂ ಇನ್ನಿರತ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

Call us

?????????? ?????????? ?????????? Guest lecturers protest in Byndoor (3) ??????????

?????????? Guest lecturers protest in Byndoor (10) Guest lecturers protest in Byndoor (9) Guest lecturers protest in Byndoor (8) Guest lecturers protest in Byndoor (7) ??????????

Guest lecturers protest in Byndoor (11) Guest lecturers protest in Byndoor (19) Guest lecturers protest in Byndoor (18) ?????????? Guest lecturers protest in Byndoor (13) Guest lecturers protest in Byndoor (12)

?????????? ??????????

Leave a Reply

Your email address will not be published. Required fields are marked *

two + 18 =