ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇವರ ಮೂರನೇ ವರ್ಷದ ಅಂಗವಾಗಿ ಸಂಘದ ನೂತನ ಕಛೇರಿ ಉದ್ಘಾಟನಾ ಸಮಾರಂಭ ಭಾನುವಾರ ಬೈಂದೂರು ಪಟವಾಲ್ ಕಟ್ಟಡದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನ ಇದರ ಮಾಜಿ ಆಡಳಿತ ಮೊಕ್ತೇಸರರು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟ ರಿ ಇದರ ಗೌರವಾಧ್ಯಕ್ಷ ಯು.ಕೆ.ಎಸ್ ಸೀತಾರಾಮ ಆಚಾರ್ಯ ಸಂಘದ ಕಛೇರಿ ಉದ್ಘಾಟಿಸಿ ಮಾತನಾಡಿ, ಯುವ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಂದಕ್ಕೂ ಸಂಘಟನೆ ಬಹಳ ಮುಖ್ಯ ಸಂಘಟನೆ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯ. ಅಲ್ಲದೇ ಸಂಘಟನೆಗಳು ನಿರ್ದಿಷ್ಟ ಗುರಿ ಉದ್ದೇಶ ಹೊಂದಿದ್ದರೆ ಯಶಸ್ಸು ಪಡೆಯಲು ಸಾಧ್ಯ ಎಂದರು.
ಗೌರವ ಉಪಸ್ಥಿತಿಯಲ್ಲಿ ಬೈಂದೂರು ಪೊಲೀಸ್ ಎಸೈ ಪವನ್ ನಾಯ್ಕ್ ಮಾತನಾಡಿ, ಸಮಾಜದ ಬಲವರ್ಧನೆಯೊಂದಿಗೆ ಪರಸ್ಪರ ಪ್ರೀತಿ ಬೆಸೆಯುವ ಉದ್ದೇಶ ಸಂಘಟನೆಯಿಂದ ಈಡೇರಿಸಲು ಸಾಧ್ಯ. ಸಮಾಜದ ಏಳಿಗೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ ಎಂದರು.
ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇದರ ಅಧ್ಯಕ್ಷ ನಾಗರಾಜ್ ಆಚಾರ್ ಬಂಕೇಶ್ವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡದ ಮಾಲೀಕ ಪರಮೇಶ್ವರ್ ಪಟ್ವಾಲ್, ಸಂಘದ ಪ್ರದಾನ ಕಾರ್ಯದರ್ಶಿ ಹರೆಗೋಡು ಸುಶಾಂತ್ ಆಚಾರ್, ಉಪಾಧ್ಯಕ್ಷ ಸುಕೇಶ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ಮಂಜುನಾಥ ಆಚಾರ್ಯ ಮಾಸ್ತಿಕಟ್ಟೆ ಸ್ವಾಗತಿಸಿದ್ದರು. ಕೋಶಾಧಿಕಾರಿ ಶ್ರೀಧರ್ ಆಚಾರ್ ಪಡುವರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಸಂತೋಷ್ ಆಚಾರ್ ಬಿಜೂರು ವಂದಿಸಿದರು. ವಿಶ್ವಕರ್ಮ ಯುವಕ ಸಂಘದ ರಿ ಬೈಂದೂರು ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭದ ಮುಂಚಿತವಾಗಿ ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.