ಬೈಂದೂರು : ವಿಶ್ವ ಆರೋಗ್ಯ ದಿನಾಚರಣೆ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೆಸಿಐ ಉಪ್ಪುಂದ ಹಾಗೂ ಅಂಜಲಿ ಆಸ್ಪತ್ರೆ ಬೈಂದೂರು ಇವರ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ತೆಂಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಆರೋಗ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರ ನಡೆಯಿತು.

Call us

Click Here

Click here

Click Here

Call us

Visit Now

Click here

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮ ಜೋಗಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಂಜಲಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ’ಜಗತ್ತಿನ ಎಲ್ಲಾ ದೇಶಗಳ ಜನರು ಆರೋಗ್ಯವಂತರಾಗಿರಬೇಕೆಂಬ ಉದ್ದೇಶದಿಂದ 1950ರ ಏಪ್ರಿಲ್ 7 ರಂದು ವಿಶ್ವ ಆರೋಗ್ಯ ಸಂಸ್ಥೆ ಸ್ಥಾಪಿತವಾಯಿತು. ಅನಂತರ ಪ್ರತಿವರ್ಷವೂ ಒಂದೊಂದು ಧ್ಯೇಯವಾಕ್ಯದಡಿಯಲ್ಲಿ ವಿಶ್ವ ಆರೋಗ್ಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜನಸಾಮಾನ್ಯರಲ್ಲಿ ಆರೋಗ್ಯ ಕುರಿತು ಸಮರ್ಪಕವಾದ ಮಾಹಿತಿ ಹಾಗೂ ಜಾಗೃತಿಯ ಕೊರತೆಯಿದೆ. ಅದನ್ನು ನೀಡುವಲ್ಲಿ ಸಂಘಸಂಸ್ಥೆಗಳು ಮುಂದಾಗಬೇಕು’ ಎಂದರು.

ರೋಗದ ಬಗೆಗೆ ಹೆದರಿಕೆ, ಭಯ ಪಡುವ ಬದಲು ಅದು ಬರದಂತೆ, ಒಬ್ಬರಿಂದ ಇನ್ನೊಬ್ಬರಿಗೆ ಹರಡದಂತೆ ಹೇಗೆ ಮುಂಜಾಗೃತೆ ವಹಿಸಬೇಕೆಂಬ ತಿಳುವಳಿಕೆ ಇರಬೇಕು. ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟರೆ ಬಹಳಷ್ಟು ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟಬಹುದು. ಕ್ರಮಬದ್ದ ಆಹಾರ ವಿಹಾರ, ಯೋಗ, ವ್ಯಾಯಾಮಗಳಿಂದ ಮಧುಮೇಹದಂತಹ ರೋಗದಿಂದ ದೂರವಿರಬಹುದು. ಅತಿಯಾದ ಆಹಾರ ಸೇವನೆ, ಮದ್ಯಪಾನ, ಧೂಮಪಾನ ಮೊದಲಾದವುಗಳು ನಮ್ಮ ಆರೋಗ್ಯವನ್ನು ಕೆಡಿಸುತ್ತದೆ. ತನ್ನ ಆರೋಗ್ಯದ ಜೊತೆಗೆ ತನ್ನ ಪರಿಸರದ, ಸಮಾಜದ ಆರೋಗ್ಯವನ್ನು ಉಳಿಸಿಕೊಳ್ಳುವಲ್ಲಿ ಪ್ರತಿಯೊಬ್ಬರೂ ಕಟಬದ್ಧರಾದಾಗ ಆರೋಗ್ಯ ಪೂರ್ಣ ಬದುಕು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಉಪ್ಪುಂದ ಇದರ ಅಧ್ಯಕ್ಷ ನರಸಿಂಹ ಹಳಗೇರಿ ವಹಿಸಿದ್ದರು. ಗ್ರಾಪಂ ಸದಸ್ಯ ಗುರುರಾಜ ಹೆಬ್ಬಾರ್, ಸುಭಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × 5 =