ಬೈಂದೂರು: ಶ್ರೀಮದ್‌ಭಗವದ್ಗೀತಾ ಪ್ರಸಾರ ಅಭಿಯಾನ ಉದ್ಘಾಟನೆ

Call us

Call us

Call us

Call us

ಬೈಂದೂರು: ಆಧುನಿಕ ಮಾನವ ಸಂಪನ್ಮೂಲ ಕೌಶಲ ವೃದ್ಧಿಯಲ್ಲಿ ಮತ್ತು ಜೀವನದ ವಿವಿಧ ಸನ್ನಿವೇಶಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಭಗವದ್ಗ್ಭಿತೆಯ ಅಂಟಿಸಿಕೊಳ್ಳದ ಮುಕ್ತ ಕಾರ್ಯವಿಧಾನವನ್ನು ಯಶಸ್ವಿ ನಾಯಕರು ಬಳಸಿಕೊಳ್ಳುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿಯೂ ಭಗವದ್ಗ್ಭಿತೆಯ ವಿಚಾರಗಳು ಉಪಯುಕ್ತತೆಯನ್ನು ಕಂಡಿವೆ. ಗೀತೆಯ ಕುರಿತು ಹಲವು ಅಪವ್ಯಾಖ್ಯಾನಗಳನ್ನು ನಿವಾರಿಸಿ ಅದರ ಉಪಯುಕ್ತತೆಯನ್ನು ಸಾರುವ ಅಭಿಮಾನ ಸಮನ್ವಯ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದು ಬೆಂಗಳೂರಿನ ಮಾಧ್ಯಮ ಭಾರತೀಯ ನಿರ್ದೇಶಕ ಹಿರಿಯ ಪರ್ತಕರ್ತ ಮೊಗೇರಿ ಜಯರಾಮ ಅಡಿಗರು ಹೇಳಿದರು.

Call us

Click Here

Click here

Click Here

Call us

Visit Now

Click here

ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆವರಣದಲ್ಲಿ ಶ್ರೀ ಸೂರ್ಯ ಸಿದ್ಧಾಂತ ಪೌಂಡೇಶನ್, ಪಂಚಾಂಗ ಮಂದಿರ ಮೊಗೇರಿ ಸಹಕಾರದೊಂದಿಗೆ ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀಗಳ ಶ್ರೀಮದ್‌ಭಗವದ್ಗೀತಾ ಪ್ರಸಾರ ಅಭಿಯಾನದ ಪ್ರವಾಚಕರು ಉಪನ್ಯಾಸಕರುಗಳಿಗೆ ಏರ್ಪಡಿಸಿದ ಶಿಬಿರದ ಉದ್ಘಾಟಿಸಿ ಮಾತನಾಡಿದರು.

ಶಿಬಿರದ ನಿರ್ದೇಶಕ ನಾವುಂದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ಪ್ರಾಂಶುಪಾಲ ಪ್ರೋ.ನಾರಾಯಣ ರಾವ್ ಮಾತನಾಡಿ, ವ್ಯಕ್ತಿತ್ವದ ನಿರ್ಮಾಣದಲ್ಲಿ ಸ್ವಭಾವ ಮತ್ತು ಕೆಲಸದಲ್ಲಿನ ಸಂಬಂಧಗಳು ಪ್ರಭಾವ ಬೀರುತ್ತವೆ. ಸ್ವ-ಸ್ವಭಾವ, ಸ್ವಧರ್ಮಗಳನ್ನು ಹೀಗೆಳೆಯದೇ ಕೌಶಲ್ಯ ವೃದ್ಧಿ ಕಡೆ ಗಮನ ನೀಡಿದಾಗ ಯಶಸ್ಸು-ಶ್ರೇಯಸ್ಸು ಲಭಿಸುತ್ತದೆ. ಶ್ರೀ ಭಗವದ್ಗೀತೆಯು ಒಂದೊಂದು ವಿಶಿಷ್ಟ ಸನ್ನಿವೇಶಗಳಲ್ಲಿ ಒಂದೊಂದು ರೀತಿಯಲ್ಲಿ ಮಾರ್ಗದರ್ಶನ ನೀಡುವುದು ಹಲವು ವ್ಯಾಖ್ಯಾನಗಳಿಂದ ರೀತಿಯಲ್ಲಿ ಮಾರ್ಗದರ್ಶನ ನೀಡುವುದು ಕಾಣಬಹುದು. ವಿಚಾರ ಪೂರ್ಣ ಅನುಸರಣೆಯಿಂದ ಪ್ರತಿಯೊಬ್ಬರೂ ಏಳಿಗೆ ಹೊಂದಬಹುದು ಎಂದರು.

ಶಿಬಿರಾರ್ಥಿಗಳಾದ ಕೇಶವ ನಾಯಕ, ಗೋವಿಂದ ಮಟ್ನಕಟ್ಟೆ, ಗೋಪಾಲ ನಾಯ್ಕ, ವಸಂತಿ ಮದ್ದೋಡಿ, ವಿ.ಎಚ್.ನಾಯಕ್, ಅಭಯಮಯ್ಯ ಇವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ರಾಮಕ್ಷತ್ರಿಯ ಸಮಾಜದ ಅಧ್ಯಕ್ಷ ಗೋಪಾಲ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಅಭಿಯಾನದ ಗೌರವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಪ್ರಾಸ್ತಾವಿಸಿದರು. ವಿಪ್ರರಂಜನಿ ತಂಡದ ವರಮಹಾಲಕ್ಷ್ಮೀ ಹೊಳ್ಳ ಮತ್ತು ಮಾತೃಮಂಡಳಿಯ ಸೀತಾ ಶ್ರೀನಿವಾಸ ಉಪಸ್ಥಿತರಿದ್ದರು. ಅಭಯ್ ಮಯ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಕೇಶವ ನಾಯ್ಕ ಸ್ವಾಗತಿಸಿ, ಸಂಚಾಲಕ ಗಣಪತಿ ಹೋಬಳಿದಾರ ನಿರೂಪಿಸಿದರು. ಡಿ. ವೆಂಕಟರಮಣ ವಂದಿಸಿದರು.

Leave a Reply

Your email address will not be published. Required fields are marked *

5 × one =