ಬೈಂದೂರು ಶ್ರೀ ರಾಮಕ್ಷತ್ರಿಯ ಯುವಕ ಸಮಾಜ: 35ನೇ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನಕರ ಪಟ್ವಾಲ್ ಆಯ್ಕೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ಇಲ್ಲಿನ ಶ್ರೀ ರಾಮಕ್ಷತ್ರಿಯ ಯುವಕ ಸಮಾಜದ 35ನೇ ವರ್ಷದ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷರಾಗಿ ದಿನಕರ ಪಟ್ವಾಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ದಡ್ಡು ಆಯ್ಕೆಯಾಗಿದ್ದಾರೆ.

Call us

Call us

Call us

ಸಮಿತಿಯ ಗೌರವ ಅಧ್ಯಕ್ಷರಾಗಿ ಗುರುರಾಜ ಹೋಬಳಿದಾರ್, ಕಾರ್ಯದರ್ಶಿಯಾಗಿ ರಾಘವೇಂದ್ರ ಎನ್. ತಗ್ಗರ್ಸೆ, ಉಪಾಧ್ಯಕ್ಷರಾಗಿ ಗುರುದಾಸ್ ಹೆಚ್, ಸುಬ್ರಹ್ಮಣ್ಯ ಮದ್ದೋಡಿ(ಶಮ್ಮೀ), ಸುರೇಶ ಬಿಜೂರು, ಕೆ.ವಿ ಸತೀಶ, ವೆಂಕಟರಮಣ ಟಿ., ಕೆ.ಟಿ ರಾಜೇಶ್, ರಾಜೇಶ್ ಕಲ್ಲುಕಂಠ, ಜೊತೆ ಕಾರ್ಯದರ್ಶಿಯಾಗಿ ದಿನಕರ ಜಿ., ಸುರೇಶ ನಾಯ್ಕ, ಮಾಣಿಕ್ಯ ಹೋಬಳಿದಾರ್, ವಿಠಲ ರೊಕ್ಕನ್ ಗಿರೀಶ ಕೆ., ಸುಬ್ರಹ್ಮಣ್ಯ ಹೋಬಳಿದಾರ್, ರಾಮಚಂದ್ರ ಆರ್.ವಿ., ಪವನ ಡಿ., ರಿತೇಶ್ ಪಟ್ವಾಲ್, ರಾಜೇಶ ಬಟ್ವಾಡಿ, ಗಣೇಶ ಕೆ., ಸುಬ್ರಹ್ಮಣ್ಯ ಬಿಜೂರು, ಕೋಶಾಧಿಕಾರಿಯಾಗಿ ರಾಜೇಶ ನೀಲಪ್ಪನಮನೆ, ಗೌರವ ಲೆಕ್ಕ ಪರಿಶೋಧಕರಾಗಿ ಸತೀಶ್ ಹೋಬಳಿದಾರ್ ಆಯ್ಕೆಯಾಗಿದ್ದಾರೆ.

Call us

Call us

ಅ.12ರಿಂದ ಶಾರದೋತ್ಸವ:
ಅ.12ರಿಂದ 15ರ ತನಕ ಬೈಂದೂರು ಶ್ರೀ ಸಿತಾರಾಮಚಂದ್ರ ದೇವಸ್ಥಾನದಲ್ಲಿ 35ನೇ ವರ್ಷದ ಶಾರದೋತ್ಸವ ಸಮಾರಂಭ ನಡೆಯಲಿದ್ದು, ಅ.12ರಂದು ಶಾರದ ದೇವಿಯ ವಿಗ್ರಹ ಪ್ರತಿಷ್ಠಾಪನೆ, ವಿವಿಧ ಪೂಜೆ ಹೋಮಗಳು ನಡೆಯಲಿದೆ. ಅಂದು ಸಂಜೆ 5 ಘಂಟೆಯಿಂದ ಅ.13ರ ಮಧ್ಯಾಹ್ನನದ ವರೆಗೆ ನವ ಚಂಡಿಕಾಯಾಗ ಬಳಿಕ ಅನ್ನಸಂರ್ಪಣೆ ನಡೆಯಲಿದೆ.

ಶಾರದೋತ್ಸವದ ಅಂಗವಾಗಿ ಅ.10ರ ಭಾನುವಾರ ರಾಮಕ್ಷತ್ರಿಯ ಸಮಾಜದ ಮಹಿಳೆಯರಿಗಾಗಿ ತ್ರೋಬಾಲ್, ಪುರುಷರಿಗಾಗಿ ವಾಲಿಬಾಲ್ ಸ್ಪರ್ಧೆ, ಅ.12ರಂದು ಭಕ್ತಿಗೀತೆ, ರಂಗೋಲಿ, ಸಂಗೀತ ಕುರ್ಚಿ, ಹೂಮಾಲೆ ಕಟ್ಟುವ ಸ್ಪರ್ಧೆ, ಭಗದ್ಗೀತಾ ಪಠಣಾ, ಅನುವಾದ ಸ್ಪರ್ಧೆ, ಹಾಗೂ ಶಂಖನಾದ ಸ್ಪರ್ಧೆ ನಡೆಯಲಿದೆ.

ಅ.13ರಂದು ಬುಧವಾರ ಸಭಾಕಾರ್ಯಕ್ರಮ, ಸನ್ಮಾನ ಬಳಿಕ ರಾಮಕ್ಷತ್ರಿಯ ಮಾತ್ರ ಮಂಡಳಿ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಅ.14ರಂದು ಸಂಜೆ ಜಿಲ್ಲೆಯ ಅಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆ ಕಾರ್ಯಕ್ರಮ ನಡೆಯಲಿದೆ. ಅ.15ರಂದು ಪುರಮೆರವಣಿಗೆಯೊಂದಿಗೆ ಶಾರದದೇವಿಯ ಜಲಸ್ಥಂಭನ ನಡೆಯಲಿದೆ.

Leave a Reply

Your email address will not be published. Required fields are marked *

12 − 5 =