ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಸುಶೀಲಾ ಐತಾಳ್ ಮತ್ತು ಮಕ್ಕಳು ಲೋಕಕ್ಯಾಣಾರ್ಥವಾಗಿ ರುದ್ರೈಕಾದಶನೀ ಹೋಮ ನೆರವೇರಿಸಿದರು. ನಂತರ ನೂತನವಾಗಿ ನಿರ್ಮಿಸಲಾದ ಪುಷ್ಪರಥವನ್ನು ಸೇವಾರೂಪದಲ್ಲಿ ಶ್ರೀದೇವರಿಗೆ ಸಮರ್ಪಿಸಿದರು. ಮಧ್ಯಾಹ್ನ ಸುಮಾರು ಎರಡು ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶನಿವಾರ ರಾತ್ರಿ ರಥಬಲಿ, ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು. ಭಾನುವಾರ ಬೆಳಿಗ್ಗೆ ನೂರಕ್ಕೂ ಹೆಚ್ಚು ವೈದಿಕರಿಂದ ಆರಂಭಗೊಂಡ ರುದ್ರೈಕಾದಶನೀ ಹೋಮಕ್ಕೆ ಮಧ್ಯಾಹ್ನ ಪೂರ್ಣಾಹುತಿ ನೀಡಲಾಯಿತು. ಶಾಸಕ ಕೆ. ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಮೊದಲಾದ ಗಣ್ಯರು ದೇವಳಕ್ಕೆ ಆಗಮಿಸಿ ನೂತನ ರಥದ ನಿರ್ಮಾಣ ಕಾರ್ಯಶೈಲಿ ವೀಕ್ಷಿಸಿ ಅಭಿನಂದಿಸಿದರು.
ಬೈಂದೂರು ಶ್ರೀ ಸೇನೇಶ್ವರ ದೇವಳದಲ್ಲಿ ರುದ್ರೈಕಾದಶನೀ ಹೋಮ, ಪುಪ್ಪರಥ ಸಮರ್ಪಣೆ
