ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಇಲ್ಲಿನ ಸುರಭಿ ಕಲಾ ಸಂಸ್ಥೆಯ ರಂಗಸುರಭಿಯ ಆಶ್ರಯದಲ್ಲಿ ಬೈಂದೂರಿನ ರೋಟರಿ ಕ್ಲಬ್ ಮತ್ತು ‘ಹಂಬಲ’ ಥೀಯೆಟರ್ನ ಸಹಕಾರದೊಂದಿಗೆ ‘ವಿಶ್ವ ರಂಗಭೂಮಿ’ ದಿನಾಚರಣೆಯನ್ನು ಆಚರಿಸಲಾಯಿತು. ಉದ್ಘಾಟನೆಯನ್ನು ಬೈಂದೂರು ರೋಟರಿ ಕ್ಲಬ್ನ ಅಧ್ಯಕ್ಷ ಶ್ರೀ ಕೃಷ್ಣಪ್ಪ ಶೆಟ್ಟಿಯವರು ಉದ್ಘಾಟಿಸಿ ರಂಗಕರ್ಮಿಗಳಿಗೆ ಶುಭ ಹಾರೈಸಿದರು. ಸುರಭಿ ಕಲಾವಿದ ಶಿಕ್ಷಕ ಶ್ರೀ ರಾಘು ಮುದ್ರ ಕಾಲ್ತೋಡು ಸ್ವಾಗತಿಸಿ ರಂಗ ನಿರ್ದೇಶಕ ಶ್ರೀ ಗಣೇಶ ಮೊಂಡಾಡಿ ರಂಗಭೂಮಿ ಸಂದೇಶ ವಾಚಿಸಿದರು. ಈ ಸಂದರ್ಭದಲ್ಲಿ ಕಲಾವಿದ ಶ್ರೀನಾದ (ಭಾಸ್ಕರ) ಮಣಿ ನಾಲ್ಕೂರು ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರೋಟರಿಯ ಖಜಾಂಚಿ ಶ್ರೀ ವೆಂಕಟೇಶ ಕಾರಂತ್ ಹಾಗೂ ‘ಹಂಬಲ’ ಥೀಯೆಟರ್ನ ಶ್ರೀ ಯೋಗಿಶ್ ಬಂಕೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದು ಸುರಭಿಯ ಶ್ರೀ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿಶೇಷ ಕಾರ್ಯಕ್ರಮವಾಗಿ ಕಲಾವಿದ ನಾದಮಣಿ ನಾಲ್ಕೂರುರವರ ‘ನಾದ-ಅರಿವಿನ ಗೀತೆಗಳು’ ಕಾರ್ಯಕ್ರಮ ಮೂಡಿ ಬಂದಿತು. ಡೋಲಕ್ನಲ್ಲಿ ಕಲಾವಿದ ಸಂತೋಷ ಸಹಕರಿಸಿದರು.