ಬೈಂದೂರು ಹೋಬಳಿ ಫ್ಲೈಯಿಂಗ್ ಸ್ಕ್ಯಾಡ್ ಬದಲಾವಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಸರ್ಕಾರದಿಂದ ಹೊರಡಿಸಲಾಗಿರುವ ಆದೇಶಗಳನ್ನು ಜಿಲ್ಲೆಯಾದ್ಯಂತ ಕಾರ್ಯಗತಗೊಳಿಸುವ ಸಲುವಾಗಿ ಫ್ಲೈಯಿಂಗ್ ಸ್ಕ್ಯಾಡ್ ಅಧಿಕಾರಿಗಳನ್ನು ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ನೇಮಿಸಲಾಗಿದ್ದು, ಬೈಂದೂರು ಹೋಬಳಿಯ ಕೊಲ್ಲೂರು, ಹಳ್ಳಿಹೊಳೆ, ಕಾಲ್ತೂಡು, ಎಳಜಿತ್, ಜಡ್ಕಲ್, ಮುದೂರು, ಗೋಳಿಹೊಳೆ ವ್ಯಾಪ್ತಿಗೆ ಕೊಲ್ಲೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯಕ್ ಮೊ.ನಂ: 9482134461 ಇವರನ್ನು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.

Call us

Call us

ಮೇಲ್ಕಂಡ ನಿಯೋಜಿತ ಅಧಿಕಾರಿಗಳು ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ತರಹದ ಲೋಪಕ್ಕೆ ಅವಕಾಶವಿಲ್ಲದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ 2005 ರಡಿ ಹಾಗೂ ಎಪಿಡೆಮಿಕ್ ಡಿಸೀಸಸ್ ರೆಗ್ಯುಲೇಷನ್ ಕ್ರಮವನ್ನು ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Call us

Call us

Leave a Reply

Your email address will not be published. Required fields are marked *

four × 1 =