ಬೈಲೂರು ಸರಕಾರಿ ಶಾಲೆಗೆ ರೋಟರಿ ಇ-ಲರ್ನಿಂಗ್ ಕೊಡುಗೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಕನ್ನಡ ಮಾಧ್ಯಮದಲ್ಲಿವೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುವಂತಾಗಬೇಕು. ಆ ನೆಲೆಯಲ್ಲಿ ರೊಟರಿ ಕ್ಲಬ್ ಹಾಗೂ ದಾನಿಗಳ ಸಹಕಾರದಿಂದ ಈವರೆಗೆ ಸರಕಾರಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 72 ಇ-ಲರ್ನಿಂಗ್ ಕಿಟ್ ನೀಡಲಾಗಿದ್ದು ಆ ಪೈಕಿ ಕುಂದಾಪುರ ತಾಲೂಕಿನ 33ಶಾಲೆಗಳನ್ನು ಗುರುತಿಸಿ ಕಿಟ್ ವಿತರಿಸಲಾಗಿದೆ ಎಂದು ರೋಟರಿ ಜಿಲ್ಲೆ ೩೧೮೦ ಗವರ್ನರ್ ಡಾ. ಭರತೇಶ್ ಹೇಳಿದರು.

Call us

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಂಕರನಾರಾಯಣ ಬೈಲೂರಿಗೆ ಇಲ್ಲಿ ರೊಟರಿಕ್ಲಬ್ ಶಂಕರನಾರಾಯಣ ಹಾಗೂ ನಿವೃತ್ತ ಕಾರ್ಪೊರೇಷನ್ ಬ್ಯಾಂಕ್ ಬ್ಯಾನೇಜರ್ ಜಯಕರ ಶೆಟ್ಟಿ ಮೂಡುಬೈಲೂರು ಇವರು ಕೊಡಮಾಡಿದ್ಧ ಇ- ಲರ್ನಿಂಗ್ ಕಿಟ್ ಚಾಲನೆಗೊಳಿಸಿ ಮಾತನಾಡಿದರು.

ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಸಂತೋಷ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು, ಮುಖ್ಯ ಅತಿಥಿಗಳಾಗಿ ರೋಟರಿಯನ್ ಟಿ. ವಿಶ್ವನಾಥ ಮದ್ಯಸ್ಥ, ಜಯಶ್ರೀ ಭರತೇಶ್, ಆನಂದ ಶೆಟ್ಟಿ, ಆನಂದ ಮೊಗವೀರ, ಶಂಕರನಾರಾಯಣ ರೋಟರಿಕ್ಲಬ್‌ನ ಸದಸ್ಯರುಗಳು ಹಾಗೂ ಶಾಲಾ ಎಸ್‌ಡಿಎಮ್‌ಸಿ ಸದ್ಯರುಗಳು ಮತ್ತು ಮಕ್ಕಳ ಪೋಷಕರುಗಳು ,ಶಿಕ್ಷಕರುಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ಧರು. ಶಾಲಾ ಮುಖ್ಯ ಶಿಕ್ಷಕ ಸಂತೋಷ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಹಶಿಕ್ಷಕ ಆನಂದ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

two × 3 =