ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಾಷ್ಟ್ರೀಯ ಹಿಂದಿ ದಿವಸ್

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತ ದೇಶದ ಜನಮಾನಸ ಭಾಷೆ ಹಿಂದಿ. ದೇಶದ ಏಕತೆ, ಗೌರವಗಳು ರಾಷ್ಟ್ರಭಾಷೆ ಹಿಂದಿಯ ಮಹತ್ವವನ್ನು ಅರಿತು ಗೌರವಿಸುವುದರಲ್ಲಿದೆ. ಮನಸ್ಸಿಗೆ ಹಿತವಾಗಿ ಸರಳವಾಗಿ ಸ್ಪಂದಿಸುವ ಹಿಂದಿ ಭಾಷೆಯಲ್ಲಿ ಎಲ್ಲರೂ ಮಾತನಾಡುವಂತಾಗಬೇಕು ಎಂದು ಕಿನ್ನಿಗೋಳಿ ಐಕಳದ ಪಾಂಪೈ ಮಹಾವಿದ್ಯಾಲಯದ ನಿವೃತ್ತ ಹಿಂದಿ ಪ್ರಾಧ್ಯಾಪಕ ಪ್ರೊ.ಗೋವಿಂದ ಭಟ್ ಕೆ.ಅವರು ಕರೆ ನೀಡಿದರು.

Call us

Call us

Call us

ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಹಿಂದಿ ವಿಭಾಗ ಆಯೋಜಿಸಿದ್ದ ರಾಷ್ಟ್ರೀಯ ಹಿಂದಿ ದಿವಸ್ ‘ಜ್ಯೋತ್ಸ್ನಾ’ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದರು.

ಹಿಂದಿ ಸಾಹಿತ್ಯದಲ್ಲಿ ಹಲವು ಪ್ರಾದೇಶಿಕ ಭಾಷೆಗಳ, ಹಲವು ಪ್ರಾದೇಶಿಕ ಸಂಸ್ಕೃತಿಗಳ ಜ್ನಾನ ಅಡಗಿದ್ದು, ದೇಶದ ಸಂಪೂರ್ಣ ಪರಿಚಯವನ್ನು ಅದರಿಂದ ಪಡೆಯಬಹುದು. ವಿಶ್ವದ ಜನರಲ್ಲಿ ಅತೀ ಹೆಚ್ಚು ಬಳಕೆಯಲ್ಲಿಅರುವ ಭಾಷೆಗಳಲ್ಲಿ ನಮ್ಮ ರಾಷ್ಟ್ರಭಾಷೆ ಹಿಂದಿ ಮೂರನೇ ಸ್ಥಾನದಲ್ಲಿದೆ. ಹಿಂದಿ ಸಾಹಿತ್ಯದ ಸತ್ವವನ್ನು ಅರಿಯುವ ತವಕ ಬೆಳೆಯಬೇಕು. ಈ ಉತ್ಸವ ಒಂದು ದಿನಕ್ಕೆ ಸೀಮಿತವಾಗಿರದೇ ವರ್ಷವಿಡಿ ಭಾಷಾ ಪ್ರೇಮ ಮತ್ತು ವಿಕಾಸದ ಜಾಗೃತಿಯ ಕಾರ್ಯ ನಡೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಕಾಳೇಝಿನ ಹೊರಗೂ ಜನಸಾಮನ್ಯರಲ್ಲಿ ಹಿಂದಿಯಲ್ಲಿ ಸಂವಹನ ನಡೆಸುವ ಪ್ರಯತ್ನ ಮಾಡಿದರೆ ಜನರಲ್ಲಿ ರಾಷ್ಟ್ರಭಾಷೆಯ ಸರಳತೆಯ ಕುರಿತು ಅರಿವು ಮೂಡುವುದರೊಂದಿಗೆ ಅಭಮಾನ ಹೆಚ್ಚುತ್ತದೆ ಎಂದರು.

ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಪ್ರಫುಲ್ಲಾ ಬಿ. ವಂದಿಸಿದರು. ಆಫಸನದ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿ ಭಾಷೆಯಲ್ಲಿ ಪ್ರದರ್ಶಿಸಿದರು.

Leave a Reply

Your email address will not be published. Required fields are marked *

17 + 14 =