ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯಕ್ಷಗಾನ ಮ್ಯೂಸಿಯಂ ಲೋಕಾರ್ಪಣೆ

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಯಕ್ಷಗಾನ (ಬಡಗು, ಬಡಾ ಬಡಗು) ಮ್ಯೂಸಿಯಂ ಲೋಕಾರ್ಪಣೆಗೊಂಡಿತು.

Call us

Call us

Visit Now

ಉದ್ಘಾಟನೆ ನೆರವೇರಿಸಿ ಮಾತನಾಡಿದ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿಗಳಾದ ಡಾ.ಹೆಚ್.ಎಸ್.ಬಲ್ಲಾಳ್ ಮಾತನಾಡಿಯಕ್ಷಗಾನ ವೆನ್ನುವುದು ನಮ್ಮ ಕರಾವಳಿ ಭಾಗದ ವಿಶಿಷ್ಟ ಕಲೆಯಾಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಯಕ್ಷಗಾನ ವಸ್ತು ಸಂಗ್ರಹಾಲಯ ನಿರ್ಮಿಸಿರುವುದು ಬಹಳ ಒಳ್ಳೆಯ ಕೇಲಸವಾಗಿದೆ. ಹಾಗೆಯೆ ಕರಾವಳಿಯ ಭಾಗವಾದ ಕುಂದಾಪುರದಲ್ಲಿ ಯಕ್ಷಗಾನ ಕಲೆಯ ಕುರಿತಂತೆ ಸಾಕಷ್ಟು ಕೆಲಸಗಳಾಗಿವೆ. ಇದೊಂದು ವಿಶಿಷ್ಟ ಪ್ರಯತ್ನವೆ ಸರಿ. ಅಲ್ಲದೇ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಅಧ್ಯಯನ ನಡೆಸಲು ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಇದೊಂದು ಒಳ್ಳೆಯ ಅವಕಾಶವನ್ನು ಮಾಡಿಕೊಟ್ಟಿದೆ. ವಿದೇಶಗಳಿಂದ ಬರುವ ವಿದ್ಯಾರ್ಥಿಗಳನ್ನು ಇಲ್ಲಿಗೆ ಅಧ್ಯಯನಕ್ಕೆ ಕಳುಹಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

Click Here

Click here

Click Here

Call us

Call us

ಡಾ.ಹೆಚ್. ಶಾಂತಾರಾಮ್ ಅವರ ೯೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಯಕ್ಷಗಾನ (ಬಡಗು, ಬಡಾ ಬಡಗು) ಮ್ಯೂಸಿಯಂ ಉದ್ಘಾಟನೆಯಾಗಿರುವುದು ಇನ್ನೂ ಸಂತೋಷದಾಯಕ. ಏಕೆಂದರೆ ಯಕ್ಷಗಾನ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ ಈ ಎಲ್ಲಾ ಕ್ಷೇತ್ರಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿರುವಡಾ.ಹೆಚ್. ಶಾಂತಾರಾಮ್ ರಿಗೆ ವಿಶೇಷ ಕೊಡುಗೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಲಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ರಂಜಿತ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು.

ನಂತರ ಮಾರುತಿ ವಿಜಯ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಬಲರಾಮನಾಗಿ ವಿದ್ಯಾಧರರಾವ್, ಜಲವಳ್ಳಿ, ಮಾರುತಿಯಾಗಿಸುಬ್ರಮಣ್ಯಚಿಟ್ಟಾಣಿ, ಸತ್ಯಭಾಮೆಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರು ಪಾತ್ರವಹಿಸಿದ್ದರು.

Leave a Reply

Your email address will not be published. Required fields are marked *

2 × 2 =