ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ: ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್- 19ನ ಆರ್ ಟಿ .ಪಿ. ಸಿ. ಆರ್ ಪರೀಕ್ಷೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರದ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಪ್ರಜ್ಞಾವಂತ ನಾಗರಿಕ ಸಮುದಾಯ ನಾವೆಲ್ಲರೂ ಕೋವಿಡ್-19 ರೋಗವನ್ನು ಬರದಂತೆ ತಡೆಯುವಲ್ಲಿ ನಮ್ಮೆಲ್ಲರ ಪಾತ್ರ ಬಹಳವಿದೆ. ಕೋವಿಡ್-19 ಬರದಂತೆ ತಡೆಯುವಲ್ಲಿ ಅಳವಡಿಸಿಕೊಂಡಿರುವಂತಹ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿ ಕೋವಿಡ್-19ನ್ನು ಕುರಿತು ಜಾಗೃತರಾಗಿ ಜನರಲ್ಲಿಯೂ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.

ಕೋವಿಡ್ -19 ಬರದಂತೆ ಕೆಲವು ನೀತಿನಿಯಮಗಳ ಪಾಲನೆಯನ್ನುಕುರಿತು ಪ್ರತಿಜ್ಞಾ ವಿಧಿ ಭೋಧಿಸಿ ನಾವು ಕೋವಿಡ್ – 19 ಹೋಗಲಾಡಿಸುವಲ್ಲಿ ಕಟು ಬದ್ಧರಾಗೋಣ ಎಂದು ಕರೆ ನೀಡಿದರು.

ಕಾಲೇಜಿನ ಸುಮಾರು 144 ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆರ್. ಟಿ.ಪಿ.ಸಿ .ಆರ್ ಪರೀಕ್ಷೆಯನ್ನು ನಡೆಸಲಾಯಿತು.

ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ರೇಖಾ ಬನ್ನಾಡಿ ಮಾತನಾಡಿದರು.

ಆರೋಗ್ಯ ಸಹಾಯಕರಾದ ನಾರಾಯಣ ಮತ್ತು ಸಿಬ್ಬಂದಿ ವರ್ಗ ಕೋವಿಡ್ – 19ಪರೀಕ್ಷೆ ಮಾಡುವಲ್ಲಿ ಸಹಕರಿಸಿದರು.

ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸತ್ಯನಾರಾಯಣ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿ ವಂದಿಸಿದರು.

Leave a Reply

Your email address will not be published. Required fields are marked *

15 + 5 =