ಭಂಡಾರ್ಕಾರ್ಸ್ ಕಾಲೇಜು ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಹಾಗೂ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನಗಳ ಸಹಯೀಗದಲ್ಲಿ ಒಂದು ದಿನದ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ” ನಡೆಯಿತು.

Call us

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ಡಾ. ತಾಳ್ತಜೆ ವಸಂತಕುಮಾರ್ ಅವರು ಭಾರತೀಯ ಧರ್ಮಗಳು ಮತ್ತು ಜೀವನಮೌಲ್ಯ ಎಂಬ ವಿಷಯದ ಕುರಿತು ಮಾತನಾಡಿ, ಇಂತಹ ಶಿಬಿರಗಳ ಅವಶ್ಯಕತೆ ಪ್ರಸ್ತುತದ ವಿದ್ಯಾಮಾನದಲ್ಲಿ ಹೆಚ್ಚಿದೆ. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಮತ್ತು ತೂಗಿಸಿಕೊಳ್ಳುವುದನ್ನು ಕಲಿತಾಗ ಶಿಬಿರದ ಆಶಯ ಸಾರ್ಥಕವಾಗುವುದು. ನಮ್ಮನ್ನು ಅರಿಯುವುದನ್ನೇ ಭಾರತೀಯ ಸಂಸ್ಕೃತಿ ಸಾರವಾಗಿದೆ. ವೈವಿಧ್ಯಮಯ ನೆಲ, ಸಾರವನ್ನು ಹೊಂದಿರುವಂತಹ ಈ ನಮ್ಮ ಭರತಖಂಡ ವೈಶಿಷ್ಟ್ಯಗಳ ಹೂರಣಗಳಿಂದ ಸಮ್ಮಿಳಿತವಾಗಿದೆ. ಅನೇಕ ಸಂಪ್ರದಾಯ, ಮನೋಭೂಮಿಕೆ, ಆರಾಧನೆ ಮತ್ತು ಆಚಾರಗಳಿಂದಲೇ ಇಲ್ಲಿ ಸಾಂಸ್ಕೃತಿಕ ಐಕ್ಯತೆ ಎನ್ನುವುದು ಹುಟ್ಟಿದೆ ಎಂದು ಅಭಿಪ್ರಾಯಪಟ್ಟರು.

ಹಾಲು ಸಕ್ಕರೆ ಬೆರೆಸಿ ತಯಾರಿಸಿದ ಪಾಕಕ್ಕೆ ಭಾರತೀಯ ಸಂಸ್ಕೃತಿ ಸಂಯೋಜಿತವಾಗಿದೆ. ಹಾಲು ಸಕ್ಕರೆಯ ಗುಣಗಳು ಜೊತೆಯಾಗಿ ಹೊಸದಾದ ಸಿಹಿಯಾದ ಸಾಮರಸ್ಯವೆಂಬ ಪಾಕವು ಭರತಖಂಡದಲ್ಲಿ ಮಿಳಿತವಾಗಿದೆ. ಕಾಲಕಾಲಕ್ಕೆ ತಕ್ಕಂತೆ ಸಾಂಸ್ಕೃತಿಕ ಸಾಮರಸ್ಯವು ಬದಲಾಯಿಸಿದರೂ ತನ್ನ ಅಂತಃಕರಣ, ಭ್ರಾತೄತ್ವ, ಪ್ರೀತಿ, ಸ್ನೇಹ ಎಂದಿಗೂ ಹಾಗೆ ಉಳಿದುಕೊಂಡಿದೆ. ಕಾಲಾನುಕ್ರಮದಲ್ಲಿ ಧರ್ಮದ ತಾತ್ವಕತೆ, ಆಚರಣೆಗಳು ಬಾರತೀಯ ನೆಲೆಗಳಲ್ಲಿ ಒಳಗೊಂಡಿದೆ. ಒಳ್ಳೆಯ ವಿಚಾರಗಳನ್ನು ಕೊಡು ಮತ್ತು ಪಡೆಯುವಿಕೆಯು ನಮ್ಮಲ್ಲಿ ಅವಿಚ್ಛಿನ್ನವಾಗಿ ಬೆಳೆದುಕೊಂಡು ಬಂದಿದೆ. ಇಂತಹ ಅಂಶಗಳು ನಮ್ಮ ಬದುಕಿನಲ್ಲಿ ಹೊಸ ಹೊಳಪನ್ನು ಮತ್ತು ಹಂಬಲವನ್ನು ಮೂಡಿಸುವಂತಾಗಲಿ ಎಂದು ಆಶಿಸಿದರು.

Call us

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗಬೇಕು. ಅನೇಕ ಸಂಪ್ರದಾಯಗಳೊಂದಿಗೆ ವೈಜ್ನಾನಿಕ ತಳಹದಿಯನ್ನು ಹುಡುಕಿದಾಗ ಬೇರೆಯದೇ ಅರ್ಥ ಸಿಗುತ್ತದೆ. ಇಂತಹ ಶಿಬಿರಗಳು ಈ ತೆರೆನಾದ ಜ್ನಾನವನ್ನು ದೊರಕಿಸುವಂತಾಗಬೇಕು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ನಾನ ಹೆಚ್ಚಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ ಸಂಚಾಲಕರಾದ ಡಾ.ಅರುಣ್ ಕುಮಾರ ಎಸ್.ಆರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ. ಗೊಂಡ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ಉಪನ್ಯಾಸಕರಾದ ಸತ್ಯನಾರಾಯಣ ವಂದಿಸಿದರು. ವಿದ್ಯಾರ್ಥಿನಿ ವೈಷ್ಣವಿ ಕಾರ್ಯಕ್ರಮ ನಿರ್ವಹಿಸಿದರು. ಉದ್ಘಾಟನೆಗೆ ಮೊದಲು ಕಾಲೇಜಿನ ಸಾಂಸ್ಕೃತಿಕ ಸಂಘದ ಸಂಯೋಜಕರಾದ ಮಮತಾ ಕೆ.ಎಸ್ ಮತ್ತು ಸವಿತಾ. ಕೆ ಇವರುಗಳ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಭಕ್ತಿ ಭಾವ ಗಾಯನ ಕಾರ್ಯಕ್ರಮ ನಡೆಯಿತು.

 

Leave a Reply

Your email address will not be published. Required fields are marked *

nineteen + three =