ಭಂಡಾರ್ಕಾರ್ಸ್ ಕಾಲೇಜು: ನಿವೃತ್ತ ಪ್ರಾಧ್ಯಾಪಕ ಡಾ. ರಾಮಚಂದ್ರ ಅವರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ರಾಮಚಂದ್ರ ಅವರನ್ನು ಕಾಲೇಜಿನ ಅಧ್ಯಾಪಕರ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ ರಾಮಚಂದ್ರ ಅವರಲ್ಲೊಂದು ನಾಯಕತ್ವದ ಗುಣವಿದೆ. ಅಪಾರ ದೇಶಪ್ರೇಮಿಯಾಗಿರುವ ಅವರಲ್ಲಿ ಹೋರಾಟದ ಮನೋಭಾವವಿದೆ. ಅವರು ಸೇವೆ ಸಲ್ಲಿಸುತ್ತಿರುವಾಗ ನಡೆಸಿದ ದೊಡ್ಡ ಕಾರ್ಯಕ್ರಮಗಳು ಅವರ ಅತ್ಯತ್ತಮ ನಾಯಕತ್ವಕ್ಕೆ ಸಾಕ್ಷಿಯಾಗಿವೆ ಎಂದು ಹೇಳಿದರು.

ಇತಿಹಾಸ ವಿಭಾಗದ ಮುಖ್ಯಸ್ಥರಾದ ಗೋಪಾಲ್ ಕೆ. ಮಾತನಾಡಿ ಅವರನ್ನು ತುಂಬಾ ವರ್ಷಗಳಿಂದ ಬಲ್ಲೆ. ಸಮಾಜಶಾಸ್ತ್ರದಲ್ಲಿ ವಿಶೇಷವಾದ ಜ್ಞಾನ ಮತ್ತು ತಿಳುವಳಿಕೆ ಹೊಂದಿರುವ ಅವರಲ್ಲೊಬ್ಬ ನಾಯಕನಿದ್ದಾನೆ. ಯಾವುದೇ ಸಮಸ್ಯೆಯನ್ನು ಅತ್ಯಂತ ನಿರಾಳವಾಗಿ ಸಲೀಸಾಗಿ ಪರಿಹರಿಸುವ ಗುಣ ಅವರಲ್ಲಿ ಕರಗತವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಮತ್ತು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಉಪಸ್ಥಿತರಿದ್ದರು.

ಅಧ್ಯಾಪಕರ ಸಂಘದ ಖಜಾಂಚಿ ಮಂಜುನಾಥ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗೀತಾ ಪ್ರಭು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Leave a Reply

Your email address will not be published. Required fields are marked *

14 − 10 =