ಭಂಡಾರ್ಕಾರ್ಸ್ ಕಾಲೇಜು ಸಂಸ್ಥಾಪಕರ ದಿನಾಚರಣೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯಕ್ಕೆ ಬುನಾದಿಯನ್ನೊದಗಿಸಿದೆ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು. ಈ ಕಾಲೇಜಿನ ಸಂಸ್ಥಾಪಕರಾದ ಡಾ.ಟಿ.ಎಂ.ಎ ಪೈ ಹಾಗೂ ಡಾ.ಎ.ಎಸ್. ಭಂಡಾರ್‌ಕಾರ್ ಅವರು ಅಂದು ಶಿಕ್ಷಣಕ್ಕಾಗಿ ಹಾಕಿಕೊಟ್ಟ ಮಾರ್ಗ ಇಂದು ಹಲವು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಹೇಳಿದರು.

Call us

Call us

Visit Now

ಇಲ್ಲಿನ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂಸ್ಥಾಪಕರ ಸಂಸ್ಮರಣೆ ೨೦೧೭ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Click here

Call us

Call us

ಟಿ.ಎಂ.ಎ. ಪೈ ಅವರು ಯಾವ ಕಾಲದಲ್ಲಿಯೂ ರಾಜಕೀಯ ಪ್ರವೇಶಿಸಿದವರಲ್ಲ. ಅವರ ಧ್ಯೇಯ ಕೇವಲ ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದಾಗಿತ್ತು. ಅವರ ಈ ಉತ್ತಮ ಉದ್ದೇಶದಿಂದ ಅಲ್ಲಲ್ಲಿ ನಿರ್ಮಾಣವಾಗಿರುವ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಹಲವರ ಪಾಲಿಗೆ ಬೆಳಕಾಗಿ ಮೂಡಿಬಂದಿದೆ. ಅನಕ್ಷರತೆ, ಅನಾರೋಗ್ಯ, ಬಡತನ ಇವುಗಳು ಮನುಷ್ಯರ ಪಾಲಿಗೆ ಯಾವಾಗಲೂ ಸಮಸ್ಯೆನ್ನೊಡ್ಡುವಂತಹವು. ಇವುಗಳನ್ನು ಸಮಾಜದಲ್ಲಿ ನಿವಾರಣೆ ಮಾಡಲು ಪ್ರಯತ್ನಿಸಿದ ಪ್ರಮುಖ ವ್ಯಕ್ತಿಗಳ ಸಾಲಿಗೆ ಸಂಸ್ಥಾಪಕರೂ ಸೇರುತ್ತಾರೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿದ್ಯಾ ಭಂಡಾರ್‌ಕಾರ್ ಮಾತನಾಡಿ, ಭಾರತ ಹಲವು ಯುವ ಸಂಪನ್ಮೂಲಗಳನ್ನು ಹೊಂದಿದೆ. ಶಿಕ್ಷಣವಂತರನ್ನೂ ಹೊಂದಿದ್ದು, ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಕ್ರಾಂತಿಗಳು ನಡೆದಿವೆ. ಭಾರತದಲ್ಲಿರುವ ಕೌಶಲ್ಯಯುಕ್ತ ಶಿಕ್ಷಣ ಪದ್ಧತಿಗಳಿಂದಾಗಿ ಶಿಕ್ಷಣ ಕ್ಷೇತ್ರಗಳೂ ಮುಂದುವರಿಯುತ್ತಿವೆ. ಇಂದು ತಂತ್ರಜ್ಞಾನಗಳ ಕ್ರಾಂತಿ ಉದ್ಯೋಗಕ್ಕೆ ಹಲವು ಅವಕಾಶಗಳನ್ನು ಒದಗಿಸುತ್ತಿದೆ. ಜೀವನದ ಬಗ್ಗೆ ಇಂದು ನಾವು ಕಾಣುವ ಕನಸುಗಳೆ ಮುಂದಿನ ನಮ್ಮ ಜೀವನದ ಹಾದಿಗಳಿಗೆ ಸ್ಫೂರ್ತಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಪ್ರತಿ ಬಾರಿ ಪದವಿಪೂರ್ವ, ಪದವಿ ವಿದ್ಯಾರ್ಥಿಗಳಿಗೆ ಹೆಗ್ಗುಂಜೆ ರಾಜೀವ ಶೆಟ್ಟಿ ಸ್ಮಾರಕ ನೀಡಲ್ಪಡುವ ವಿದ್ಯಾರ್ಥಿವೇತನವನ್ನು ಈ ಬಾರಿ ಒಟ್ಟು ೧೮೮ ವಿದ್ಯಾರ್ಥಿಗಳಿಗೆ ನೀಡಲಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಕಾರ್ಯದರ್ಶಿ ರಾಜೀವ ಶೆಟ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಶುಭಹಾರೈಸಿದರು.

ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಶಾಂತಾರಾಮ್ ಭಂಡಾರ್‌ಕಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾದ ಅರುಣಾ ಭಂಡಾರ್‌ಕಾರ್, ಟ್ರಸ್ಟಿಗಳಾದ ಪ್ರಕಾಶ್ ಸೋನ್ಸ್, ಪ್ರಜ್ಞೇಶ್ ಪ್ರಭು, ಶಾಂತಾರಾಮ ಪ್ರಭು, ರಾಜೇಂದ್ರ ತೋಳಾರ್, ಸದಾನಂದ ಚಾತ್ರ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಎಂ.ಗೊಂಡ ಮತ್ತಿತರರು ಉಪಸ್ಥಿತರಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ರಜನಿ, ಚೈತ್ರಾ ಪ್ರಾರ್ಥಿಸಿದರು. ಇತಿಹಾಸ ಉಪನ್ಯಾಸಕ ಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.

 

Leave a Reply

Your email address will not be published. Required fields are marked *

one × 4 =