ಭಂಡಾರ್ಕಾರ್ಸ್ ಕಾಲೇಜು: ಸಂಸ್ಥಾಪಕರ ದಿನಾಚರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ರೀಜನಲ್ ಹೆಲ್ತ್‌ಕೇರ್ ಗ್ರೂಪ್  ಸಿಂಗಾಪುರದ ಶ್ರೀಕಾಂತ್, ಮಾತನಾಡಿ ಶ್ರೇಷ್ಠ ಮತ್ತು ಉದಾತ್ತ ಜೀವನ ಎಂಬ ವಿಷಯದ ನೆಲೆಯಲ್ಲಿ ಮಾತನಾಡಿ ಬದುಕು ನಮ್ಮ ವಿಚಾರಗಳಿಗೆ ಪೂರಕವಾಗಿರುತ್ತದೆ. ಅಮೂಲ್ಯವಾದ ಈ ಬದುಕು ಸದಾ ಉದಾತ್ತ ಆಲೋಚನೆಗಳೊಂದಿಗೆ ಖುಷಿಯಾಗಿರಬೇಕು. ನಮ್ಮನ್ನು ನಾವು ಚೆನ್ನಾಗಿ ಖುಷಿಯಾಗಿರಿಸಿಕೊಳ್ಳಬೇಕೆಂದರೆ ಇರುವ ಸಮಯದಲ್ಲಿ ಒಳ್ಳೆಯ ವಿಚಾರಗಳನ್ನು ಸಹ ಅಳವಡಿಸಿಕೊಳ್ಳಬೇಕು. ಯಾಕೆಂದರೆ ಸಮಯವೆಂದಿಗೂ ನಮಗಾಗಿ ಕಾಯುವುದಿಲ್ಲ ಅಲ್ಲದೇ ನಮ್ಮ ಶ್ರೇಷ್ಠ ವಿಚಾರಗಳು ನಮ್ಮೊಳಗೆ ಪರಿಪೂರ್ಣತೆಯನ್ನು ರೂಪಿಸುತ್ತದೆ. ನಿರಂತರವಾಗಿ ಉದಾತ್ತ ಮೌಲ್ಯಗಳ ನೆಲೆಯಲ್ಲಿ ನಮ್ಮ ಬದುಕು ನಡೆಸಬೇಕು. ನಮ್ಮ ನಿತ್ಯದ ಬದುಕಿನಲ್ಲಿ ಆದಷ್ಟು ಒಳ್ಳೆಯ ವಿಚಾರ ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡು ನಮ್ಮ ಬದುಕನ್ನು ಖುಷಿಯಾಗಿರಿಸಬೇಕು ಎಂದು ಹೇಳಿದರು

ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಶಾಂತಾರಾಮ್ ಎ.ಭಂಡಾರ್ಕಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜೀವನದ ಗುರಿಯನ್ನು ತಿಳಿಯಬೇಕೆಂದರೆ ಭಗವದ್ಗೀತೆಯನ್ನು ಅರ್ಥೈಸಿಕೊಳ್ಳಬೇಕು. ಅಲ್ಲದೇ ದೇವರ ಭಯವೇ ಜ್ಞಾನದ ಮೂಲವಾಗಿದೆ ಎಂದು ಹೇಳಿದರು.

ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಶಾಂತಾರಾಮ್ ದಿಕ್ಸೂಚಿ ಭಾಷಣ ಮಾಡಿದರು.

ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಮಂಡಳಿಯ ಸದಸ್ಯ ಕೆ.ಶಾಂತಾರಾಮ್ ಪ್ರಭು ಉಪಸ್ಥಿತರಿದ್ದರು. ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಂ.ಗೊಂಡ ವಂದಸಿದರು.

ಉಪನ್ಯಾಸಕಿ ರೋಹಿಣಿ.ಹೆಚ್.ಬಿ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಕವಾಗಿಕಾಲೇಜಿನ ಐಟಿ ತಂಡದ ಸದಸ್ಯ ಅಮರ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ ಮತ್ತು ವಿಕ್ರಮ್ ಸಹಕರಿಸಿದರು.

Leave a Reply

Your email address will not be published. Required fields are marked *

19 + eighteen =