ಭಂಡಾರ್ಕಾರ್ಸ್ ಕಾಲೇಜು: ಸಹ ಪ್ರಾಧ್ಯಪಕ ಹಾಗೂ ಕಚೇರಿ ಸಿಬ್ಬಂದಿಗೆ ಗೌರವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಧ್ಯಾಪಕರ ಸಂಘದ ವತಿಯಿಂದ ಸರಕಾರಿ ಸೇವೆಯಿಂದ ನಿವೃತ್ತರಾದ ಕಾಲೇಜಿನ ಕನ್ನಡ ಪ್ರಾಧ್ಯಾಪಕರರಾದ ಪ್ರೊ. ಗಣಪತಿ ಭಟ್, ಮತ್ತು ಕಚೇರಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ದಿನಕರ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕನ್ನಡ ಪ್ರಾಧ್ಯಾಪಕರರಾದ ಪ್ರೊ. ಗಣಪತಿ ಭಟ್ ಮಾತನಾಡಿ, ಸೇವೆಯಿಂದ ನಿವೃತ್ತನಾದ ನನಗೆ ನನ್ನ ಕೃಷಿ ವೃತ್ತಿ ಮುಂದುವರೆಸಿಕೊಂಡು ಹೋಗುವಂತೆ ಮಾಡಿದೆ. ಹಾಗೆಯೇ ವಿದ್ಯಾಥಿಗಳೊಂದಿಗೆ ಮತ್ತು ಉಪನ್ಯಾಸಕರೊಂದಿಗಿನ ಭಾಂದವ್ಯವನ್ನು ನೆನಪಿಸಿಕೊಂಡರು.

ಪ್ರೊ. ಗಣಪತಿ ಭಟ್ ಅವರ ಕುರಿತು ಕನ್ನಡ ವಿಭಾಗ ಮುಖ್ಯಸ್ಥೆ ಡಾ. ರೇಖಾ ಬನ್ನಾಡಿ ಮಾತನಾಡಿದರು. ದಿನಕರ ಶೆಟ್ಟಿಗಾರ್ ಕುರಿತು ಗೀತಾ ಪ್ರಭು ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಗೊಂಡ, ಅಧ್ಯಾಪಕರ ಸಂಘದ ಅಧ್ಯಕ್ಷರಾದ ಶಂಕರನಾರಾಯಣ ಕೆ. ಉಪಸ್ಥಿತರಿದ್ದರು.

ಅಧ್ಯಾಪಕರ ಸಂಘದ ಖಜಾಂಚಿ ಮಂಜುನಾಥ ಸ್ವಾಗತಿಸಿದರು. ಕಾರ್ಯದರ್ಶಿ ಗುರುದಾಸ ಪ್ರಭು ವಂದಿಸಿದರು. ಗೀತಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

fifteen − 5 =