ಭಂಡಾರ್ಕಾರ್ಸ್ ಕಾಲೇಜು: ಸಹ ಪ್ರಾಧ್ಯಾಪಕ ಗಣಪತಿ ಭಟ್ ಅವರಿಗೆ ಬೀಳ್ಕೊಡುಗೆ

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಹ ಪ್ರಾಧ್ಯಾಪಕರಾದ ಗಣಪತಿ ಭಟ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿತು.

Click Here

Call us

Call us

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಗಣಪತಿ ಭಟ್‌ವರನ್ನು ನಾನು ಹಿಂದಿನಿಂದಲೂ ಗಮನಿಸಿದಂತೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಕಷ್ಟಕರ ದಿನವಾದ ಕೊರೋನಾ ಸಂದರ್ಭದಲ್ಲಿಯೂ ಕೂಡ ತಂತ್ರಜ್ಞಾನದ ಆನ್‌ಲೈನ್ ತರಗತಿಯನ್ನು ನಿರ್ವಹಣೆ ಮಾಡಿರುವುದನ್ನು ನೆನಪಿಸಿಕೊಂಡರು. ವಿದ್ಯಾರ್ಥಿಗಳಿಗೆ ಒಳ್ಳೆಯ ಉಪನ್ಯಾಸಕನಾಗಿ ಕನ್ನಡ ಜ್ಞಾನಧಾರೆಯೆರೆಯುವಲ್ಲಿ ಪ್ರಯತ್ನಶೀಲರಾಗಿದ್ದರೆಂದು ಎಂದು ಹೇಳಿದರು.

Click here

Click Here

Call us

Visit Now

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ. ವಿ. ಬನ್ನಾಡಿ ಮಾತನಾಡಿ, ಸಹೋದ್ಯೋಗಿಯಾದ ಗಣಪತಿ ಭಟ್‌ರವರು ಪ್ರತಿದಿನ ದೂರದ ಊರಿನಿಂದ ಬರುತ್ತಿದ್ದರೂ ಕೂಡ ಹಾಗೆ 20 ವರ್ಷ ನಮ್ಮ ಜೊತೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಸಹಕಾರ ಮನೋಭಾವವನ್ನು ತೋರಿರುವುದನ್ನು ಸ್ಮರಿಸಿಕೊಂಡರು.

ಸನ್ಮಾನಿತರಾದ ಗಣಪತಿ ಭಟ್‍ ಮಾತನಾಡಿ, ತಮ್ಮ ಕಲಿಕೆಯ ಕಾಲಘಟ್ಟವನ್ನು ನೆನಪಿಸಿಕೊಂಡರು. ಆಗ ಕೃಷಿಯ ಜೊತೆಗೆ ಓದು ಮತ್ತು ಉದ್ಯೋಗ ಎಲ್ಲಾ ಸಾದ್ಯವಾಗುತ್ತಿತ್ತು.ಹಿರಿಯರ ಮಾರ್ಗದರ್ಶನ ಹಿಂದಿನ ಕಾಲದಲ್ಲಿ ಒದಗಿ ಬರುತ್ತಿತ್ತು.ಈಗಿನ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಸಿಲುಕುತ್ತಿದ್ದಾರೆಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಕನ್ನಡ ಭಾಷಾ ವಿಭಾಗದ ಉಪನ್ಯಾಸಕ ಮಂಜುನಾಥ ಕೆ. ಎಸ್ ನಿರೂಪಣೆಗೈದರು. ಉಪನ್ಯಾಸಕ ಮೋಹನ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಮೈತ್ರಿ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

Call us

Leave a Reply

Your email address will not be published. Required fields are marked *

two + 8 =