ಕುಂದಾಪುರ: ಹಳೆ ವಿದ್ಯಾರ್ಥಿಗಳು ಕಾಲೇಜಿನ ಕಾರ್ಯಚಟುವಟಿಕೆಯಲ್ಲಿ ಸ್ಪಂದಿಸಿದಾಗ ಕಾಲೇಜು ಉತ್ತಮ ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದೆ. ಅವರ ಕಾರ್ಯಚಟುವಟಿಕೆ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿರಲಿ ಎಂದು ಉಡುಪಿ ಜಿಲ್ಲೆಯ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಆರ್.ಬಿ. ನಾಯಕ್ ಹೇಳಿದರು.
ಅವರು ಭಂಡಾರ್‌ಕಾರ್ಸ್ ಪಿ.ಯು ಕಾಲೇಜು ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಪಿ.ಯು ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು, ಎಸ್.ಪಿ. ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಹುಡುಗರ ವಿಭಾಗದಲ್ಲಿ ಉಡುಪಿಯ ಎಂ.ಜಿ.ಎಂ. ಪಿಯು. ಕಾಲೇಜು ಪ್ರಥಮ, ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು. ಕಾಲೇಜು ದ್ವಿತೀಯ, ಕುಂದಾಪುರದ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು ತೃತೀಯ, ಕುಂದಾಪುರದ ಎಸ್.ಎಂ.ಎಸ್ ಪಿ.ಯು. ಕಾಲೇಜು ನಾಲ್ಕುನೇ ಬಹುಮಾನವನ್ನು ಪಡೆದುಕೊಂಡರು. ಹುಡುಗಿಯರ ವಿಭಾಗದಲ್ಲಿ ಕಾರ್ಕಳದ ಜ್ಞಾನ ಸುಧಾ ಪಿ.ಯು.ಕಾಲೇಜು ಪ್ರಥಮ, ಬ್ರಹ್ಮಾವರದ ಎಸ್.ಎಂ.ಎಸ್ ಪಿ.ಯು. ಕಾಲೇಜು ದ್ವಿತೀಯ, ಉಡುಪಿಯ ಪೂರ್ಣಪ್ರಜ್ಞ ಪಿ.ಯು. ಕಾಲೇಜು ತೃತೀಯ ಹಾಗೂ ಕುಂದಾಪುರದ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು ನಾಲ್ಕನೇ ಬಹುಮಾನವನ್ನು ಪಡೆದುಕೊಂಡರು.
ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರು ಸಂದೀಪ್ ಪೂಜಾರಿ, ಕುಂದಾಪುರದ ಭಂಡಾರ್‌ಕಾರ್ಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ, ಭಂಡಾರ್‌ಕಾರ್ಸ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶಂಕರನಾರಾಯಣ ಕೆ., ಪೂರ್ವಾಧ್ಯಕ್ಷ ರಾಘವೇಂದ್ರ ಚರಣ ನಾವಡ, ಉಪಸ್ಥಿತರಿದ್ದರು. ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ಥ ಸ್ವಾಗತಿದರು, ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ, ವಕ್ವಾಡಿ ವಂದಿಸಿದರು.