ಭಂಡಾರ್‌ಕಾರ್ಸ್ ಕಾಲೇಜು: ವಿಶ್ವವಿದ್ಯಾಲಯ ಮಟ್ಟದ ಸ್ವರ್ಧಾ-17

Click Here

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ವ್ಯವಹಾರ ಅಧ್ಯಯನ ಉತ್ಸವ ಸ್ಪರ್ಧಾ- 17 ಯಶಸ್ವಿಯಾಗಿ ಜರುಗಿತು.

Call us

Call us

Click Here

Visit Now

ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಧಾಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ ಸಾಕಷ್ಟು ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಈ ಸ್ಪರ್ಧೆಯನ್ನು ಎದುರಿಸುವ ನಿಟ್ಟಿನಲ್ಲಿ ಸಾಕಷ್ಟು ವಿದ್ಯಾರ್ಹತೆ, ಕೌಶಲದ ಜೊತೆಗೆ ಪ್ರಸ್ತುತ ಜಗತ್ತಿನ ಕುರಿತು ಜ್ನಾನ ಸಂಪಾದನೆಯು ಅತ್ಯಂತ ಅತ್ಯಗತ್ಯವಾಗಿರುತ್ತದೆ. ಈ ದಿಶೆಯಲ್ಲಿಕಠಿಣ ಪರಿಶ್ರಮ, ಚುರುಕುತನ, ಆಸಕ್ತಿ ಮತ್ತು ಆತ್ಮವಿಶ್ವಾಸಗಳನ್ನು ನಮ್ಮದಾಗಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಹೇಳಿದರು.

Click here

Click Here

Call us

Call us

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್.ಶಾಂತಾರಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿಕುಂದಾಪುರಕೆರಿಯರ್‌ಕೋಚಿಂಗ್‌ಕೇಂದ್ರದರಾಜೇಶ್ ಶೆಟ್ಟಿಅವರುಸಿಎ-ಸಿಪಿಟಿ ಮತ್ತು ಅಯ್‌ಪಿಸಿಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಿದರು.

ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತುಸ್ಪರ್ಧಾ- 17  ಇದರ ಮುಖ್ಯ ಸಂಯೋಜಕರಾದ ಪ್ರೊ.ಜಿ.ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ.ಅರುಣಾಚಲ ಮಯ್ಯ,ಭಂಡಾರ್ಕಾರ್ಸ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದಜಿ.ಎಂ.ಗೊಂಡ iತ್ತು ವ್ಯವಹಾರಅಧ್ಯಯನ ವಿಭಾಗದ ಮುಖ್ಯಸ್ಥೆಅರ್ಚನಾಅರವಿಂದ ಮತ್ತುಸ್ಪರ್ಧಾ- 17ಇದರ ವಿದ್ಯಾರ್ಥಿ ಸಂಯೋಜಕರಾದ ವಿಘ್ನೇಶ್ ಮತ್ತುರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಶ್ಲಿನ್ ಕಾರ್ಯಕ್ರಮ ನಿರ್ವಹಿಸಿದರು. ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸುಮಾರು 18 ಕಾಲೇಜುಗಳು ಭಾಗವಹಿಸಿದ್ದವು.

Leave a Reply

Your email address will not be published. Required fields are marked *

one × three =