ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ತೃತೀಯ ಬಿಎಸ್ಸಿ ವಿದ್ಯಾರ್ಥಿಗಳ ತಂಡ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಸ್ಪರ್ಧೆಯಲ್ಲಿ ವಿವಿಧ ತರಗತಿಗಳ 8 ತಂಡಗಳು ಭಾಗವಹಿಸಿದ್ದವು.
ಸ್ಪರ್ಧೆಗೂ ಮೊದಲು ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರಾದ ಡಾ.ಹೆಚ್.ಶಾಂತಾರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ಲದೇ ಕಾಲೇಜಿನ ಕುರಿತು ವಿದ್ಯಾರ್ಥಿ ಸಜಿತ್ ನಿರ್ಮಾಣದ ಸಮನ್ವಯ ಮತ್ತು ವಿದ್ಯಾರ್ಥಿಗಳಾದ ಶಿವರಾಜ್ ಮತ್ತು ಕೀರ್ತನ್ ನಿರ್ಮಾಣದ ಸೆಕ್ಟ್ರಮ್ 2ಕೆ18 ಎಂಬ ಎರಡು ಸಾಕ್ಷ್ಯಚಿತ್ರಗಳನ್ನು ಉದ್ಘಾಟಿಸಿದರು. ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ವಿವಿಧ ತರಗತಿಗಳ 8 ತಂಡಗಳು ಭಾಗವಹಿಸಿದ್ದವು.
ಬಹುಮಾನ ವಿತರಣಾ ಸಮಾರಂಭದ ಅದ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ . ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಉದಯ ಗಾಂವಂಕರ, ಸುಬ್ರಮಣ್ಯ ಶೆಟ್ಟಿ ಮತ್ತು ಡಾ.ರಜನಿ ರಾವ್ ಮತ್ತು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಅರುಣಾಚಲ ಮಯ್ಯ ಮತ್ತು ಲಲಿತಕಲಾ ಸಂಘದ ಸಂಚಾಲಕರಾದ ಮಮತಾ ಕೆ.ಎಸ್ ಉಪಸ್ಥಿತರಿದ್ದರು.